ಅಕ್ರಮ ರಕ್ತ ಚಂದನ ವಶ
ಕೋಲಾರ: ನಗರ ಹೊರವಲಯದ ಎಪಿಎಂಸಿ ಬಳಿ ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರುತಿ 800 ವಾಹನವೊಂದರಲ್ಲಿ ಅಕ್ರಮವಾಗಿ ರಕ್ತ ಚಂದನ ಸಾಗಾಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ನಗರ ಠಾಣೆಯ ಸಿಪಿಐ ಶಿವಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿದಾಗ ಕಾರಿನ ಚಾಲಕ ವಾಹನವನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಕಾರಿನಲ್ಲಿ 9 ರಕ್ತ ಚಂದನ ತುಂಡುಗಳು ಪತ್ತೆಯಾಗಿದ್ದು ಸುಮಾರು 130 ಕೆಜಿ ಇರಬಹುದೆಂದು ಅಂದಾಜಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರಕ್ತ ಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.