ಕರವೇ ಘಟಕದ ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ಕನ್ನಡ ಭಾಷೆ, ನೆಲ, ಜಲಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಹಳ್ಳಿಯಿಂದ ನಗರದವರೆಗೂ ಸಂಘಟಿಸಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರವೇ ಜಿಲ್ಲಾ ಅಧ್ಯಕ್ಷ ಎಂ.ಆರ್.ಲೋಕೇಶ್ ಹೇಳಿದರು. ನಕಸಬಾ ಹೋಬಳಿ ಅಧ್ಯಕ್ಷರನ್ನಾಗಿ ಮುನಗನಹಳ್ಳಿ ಎನ್.ಚಂದ್ರಶೇಖರ್, ಎಸ್.ಸುಬ್ರಮಣಿ, ಸಂಚಾಲಕರನ್ನಾಗಿ ಎಸ್.ಗೋಪಿ, ಕೆ.ಆರ್.ಶಿವಣ್ಣ, ಶ್ರೀನಿವಾಸರೆಡ್ಡಿ, ಎನ್.ಎ.ರಾಮಚಂದ್ರ, ರಾಘವೇಂದ್ರಚಾರಿ, ಜಾಕೀರ್ ಹುಸೇನ್ರನ್ನು ಆಯ್ಕೆ ಮಾಡಲಾಯಿತು.