ಕರವೇಯಿಂದ ಜನ್ಮದಿನಾಚರಣೆ
ಮಾಲೂರು: ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 123 ನೇ ಜನ್ಮದಿನಾಚರಣೆಯನ್ನು ಸ್ಥಳೀಯ ಕರವೇ ಕಾರ್ಯಕರ್ತರು ಇಲ್ಲಿನ ಹೂಸೂರು-ಮಾಸ್ತಿ ವೃತ್ತದಲ್ಲಿರುವ ಡಾ.ಮಾಸ್ತಿ ವಂಕಟೇಶ್ ಅಯ್ಯಂಗಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ಪುರಸಭೆ ಸದಸ್ಯ ಮುರಳೀಧರ್, ಕಾರ್ಯದರ್ಶಿ ಬ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಾಜು ಮಾತನಾಡಿದರು. ಪಚ್ಚಪ್ಪ, ಮಾಲಾದ್ರಿ, ಲತಾಬಾಯಿ, ಸರಸ್ವತಿ, ಪ್ರಸನ್ನಕುಮಾರ್, ರವಿ ಕುಮಾರ್, ನವೀನ್, ಆಟೋ ಅಮೀರ್, ಆಟೋ ಮಂಜು, ಆಟೋ ರಾಮರೆಡ್ಡಿ, ಲವ-ಕುಶ ಇದ್ದರು.