ನೀರು ಪೋಲು: ತಾಯಿ, ಮಗನ ಮೇಲೆ ಹಲ್ಲೆ
ಶಿಡ್ಲಘಟ್ಟ: ಪೋಲಾಗುತ್ತಿದ್ದ ನೀರು ನಿಲ್ಲಿಸಲು ಹೋದ ಯುವಕ ಹಾಗೂ ಆತನ ತಾಯಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ತಾಲೂಕಿನ ಆನೆಮಡಗು ಗ್ರಾಮದಲ್ಲಿ ಕೊಳಾಯಿಯಲ್ಲಿ ಅನಗತ್ಯವಾಗಿ ಪೋಲಾಗುತ್ತಿದ್ದ ನೀರನ್ನು ನಿಲ್ಲಿಸಲು ಹೋಗಿದ್ದನೆನ್ನಲಾದ ಯುವಕ ಸುರೇಶನ ಮೇಲೆ ಇದೇ ಗ್ರಾಮದ ಕೆಲವು ಮಂದಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಗಮನಿಸಿದ ಆತನ ತಾಯಿ ಮುನಿವೆಂಕಟಮ್ಮ ಮಧ್ಯೆ ಪ್ರವೇಶಿಸಿದ್ದಾಳೆ. ಆಕೆ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.