ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಂಗಾರಪೇಟೆ: ಸಂತಸ ತಂದ ಮಳೆ

Rashmi Kasaragodu
Updated On : 7 Jun 2014, 1:14 am

ಬಂಗಾರಪೇಟೆ: ಕಳೆದ 8 ವರ್ಷಗಳಿಂದ ಮಳೆರಾಯನ ದರ್ಶನವಿಲ್ಲದೆ ಕಂಗಾಲಾಗಿದ್ದ ಕ್ಷೇತ್ರದ ಜನರಿಗೆ ಕಳೆದ ಮೂರ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಆಶಾಭಾವನೆ ಮೂಡಿಸಿದ್ದು ನೀರಿಲ್ಲದೆ ಒಣಗಿದ್ದ ಕೆರೆಗಳಿಗೆ ಸ್ವಲ್ಪ ಮಟ್ಟಿಗೆ ನೀರು ಶೇಖರಣೆಯಾಗಿರುವುದು ಸಂತಸ ಉಂಟು ಮಾಡಿದೆ. ಮುಂಗಾರು ಮಳೆ ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಜೋರಾಗಿ ಸುರಿಯಎತತ್ತಿದೆ.  ಸಣ್ಣಪುಟ್ಟ ಕೆರೆಗಳಿಗೆ ನೀರು ಬಂದಿದೆ. ಜನತೆಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಲು ಆಗದೆ ಚಡಪಡಿಸುತ್ತಿದ್ದ ಜನಪ್ರತಿನಿಧಿಗಳಿಗೆ ಮಳೆಯಿಂದ ಸ್ವಲ್ಪ ಮಟ್ಟಿಗೆ ಉಸಿರಾಡುವಂತೆ ಮಾಡಿದೆ. ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆಗೆದರೆ ನೀರು ಸಂಗ್ರಹವಾಗುವುದಕ್ಕೆ ಅನುಕೂಲವಾಗಲಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಮೊದಲು ರಾಜಕಾಲುವೆ ಒತ್ತುವರಿಯನ್ನು ತೆರವು ಕಾರ್ಯವನ್ನು ಚುರುಕುಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement