ಮಳೆಗೆ 8 ವರ್ಷದ ಬಾಲಕಿ ಬಲಿ
ಬಾಗೇಪಲ್ಲಿ: ಜೋರು ಮಳೆಗೆ ಗುಡಿಸಲು ಮನೆ ಉರುಳಿ ಬಿದ್ದ ಪರಿಣಾಮ ಒಬ್ಬ ಬಾಲಕಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ತಾಲೂಕಿನ ಪಾತಬಾಗೇಪಲ್ಲಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿ ಹೆಸರು ಲಕ್ಷ್ಮೀ(8). ರಂಗಮ್ಮ, ಆದಿಲಕ್ಷ್ಮಮ್ಮ ಹಾಗೂ ಗಂಗಾಧರಪ್ಪ ಗಾಯಗೊಂಡವರು. ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದಾರೆ. ಮನೆಯ ಗೋಡೆ ಕುಸಿದ ಪರಿಣಾಮ ಬಾಲಕಿ ಮೇಲೆ ಹುಲ್ಲು, ಕಟ್ಟಿಗೆಗಳು ಬಿದ್ದು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಪ್ರಭಾರಿ ತಹಸೀಲ್ದಾರ್ ಶೈಲಜಾ ಭೇಟಿ ನೀಡಿ ಶವ ಸಂಸ್ಕಾರಕ್ಕೆ 1 ಸಾವಿರ ಸಹಾಯಧನ ನೀಡಿದರು