ಇಂದು ನಡೆಯಬೇಕಿದ್ದ ಎಪಿಎಂಸಿ ಬಂದ್ ವಾಪಸ್
ಚಿಂತಾಮಣಿ: ರೈತ ಸಂಘ ಹಾಗೂ ಹಸಿರು ಸೇನೆ ಜೂ. 8ರಂದು ಎಪಿಎಂಸಿ ಮಾರ್ಕೆಟ್ ಬಂದ್ಗೆ ನೀಡಲಾಗಿದ್ದ ಕರೆಯನ್ನು ವಾಪಸ್ ಪಡೆಯಲು ಶುಕ್ರವಾರ ನಡೆದ ಸಭೆಯಲ್ಲಿ ವಾಪಸ್ ಪಡೆಯಲಾಗಿದೆ.ಈ ಸಭೆಯ ಅಧ್ಯಕ್ಷತೆಯನ್ನು ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ ವಹಿಸಿದ್ದರು. ಚಿಕ್ಕಬಳ್ಳಾಪುರ ಹಾಗೂ ಕೋಲಾರ ರೈತ ಸಂಘ, ಹಸಿರು ಸೇನೆ ಅಧ್ಯಕ್ಷರಾದ ಲಕ್ಷ್ಮಿನಾರಾಯಣರೆಡ್ಡಿ, ಶ್ರೀನಿವಾಸಗೌಡ ಹಾಗೂ ತಾಲ್ಲೂಕು ಅಧ್ಯಕ್ಷ ರಘುನಾಥರೆಡ್ಡಿ ಸೇರಿ ಹಲವು ರೈತರು ಭಾಗವಹಿಸಿದ್ದರು. ಸಭೆಯಲ್ಲಿ ಬಂದ್ ಕೈ ಬಿಡುವ ಹಾಗೂ ಬೆಂಬಲಿಸುವ ಬಗ್ಗೆ ಕೆ.ಎಸ್.ಪುಟ್ಟಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಬಣಗಳ ಮಧ್ಯೆ ಬಿಸಿ ಬಿಸಿ ಚರ್ಚೆಯೂ ನಡೆಯಿತು. ಅಂತಿಮವಾಗಿ ರೈತರ ಹಿತದೃಷ್ಟಿಯಿಂದ ಜೂ.8ರಂದು ಆಚರಿಸಬೇಕಿದ್ದ ಎಪಿಎಂಸಿ ಬಂದ್ ಅನ್ನು ಕೈ ಬಿಡಲಾಯಿತು. ಈ ವೇಳೆ, ಜಿಲ್ಲಾ ಸಹಾಯಕ ಕಾರ್ಯದರ್ಶಿ ರೆಡ್ಡಪ್ಪ, ವೆಂಕಟೇಶಪ್ಪ, ತಾಲೂಕು ಸಂಚಾಲಕರು ಗಂಗುಲಪ್ಪ, ಕಾರ್ಯದರ್ಶಿ ಕೆ.ಎನ್.ಕೃಷ್ಣ, ಶ್ರೀನಾಥ್, ನಾರಾಯಣಸ್ವಾಮಿ,ಶ್ರೀರಾಮರೆಡ್ಡಿ, ವೆಂಕಟೇಶಪ್ಪ, ಗೋಪಾಲ್, ವೆಂಕಟೇಶಪ್ಪ ಸೇರಿದಂತೆ ಇನ್ನೂ ಹಲವು ರೈತ ಮುಖಂಡರು ಉಪಸ್ಥಿತರಿದ್ದರು.