ಬೆಂಕಿ ಆಕಸ್ಮಿಕ: ಬಣವೆ ಭಸ್ಮ
ಗೌರಿಬಿದನೂರು: ತಾಲೂಕಿನ ಕುರೂಡಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಟಿ.ಅಶ್ವತ್ಥಪ್ಪ ಮತ್ತು ಟಿ.ರಂಗಸ್ವಾಮಯ್ಯ ಎಂಬುವರಿಗೆ ಸೇರಿದ ಎರಡು ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಹುಲ್ಲು ಸುಟ್ಟು ಭಸ್ಮವಾಗಿದೆ.ಗ್ರಾಮಸ್ಥರು ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಕಸ್ಮಿಕ ಬೆಂಕಿಯಿಂದ ಜಾನುವಾರುಗಳಿಗೆ ಅವಶ್ಯಕ ಇರುವ ಹುಲ್ಲು ಬಣವೆಗೆ ಬೆಂಕಿ ಬಿದ್ದು ತುಂಬಲಾರದಂತಹ ನಷ್ಟ ಉಂಟುಮಾಡಿದೆ. ಸರ್ಕಾರ ಪರಿಹಾರ ಹಣ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ವಾರ್ಷಿಕೋತ್ಸವ: ಕೋಲಾರ ನಗರದ ಕೋಟೆಯಲ್ಲಿರುವ ಶ್ರೀಸ್ಥಳ ಗಂಗಾಮಾತೆ ದೇವಾಲಯದಲ್ಲಿ ಅನ್ನಪೂರ್ಣೇಶ್ವರಿ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.8 ರಂದು ನಡೆಯಲಿದೆ.ಬೆಳಗ್ಗೆ 6.30ಕ್ಕೆ ಅನ್ನಪೂರ್ಣೇಶ್ವರಿ ಪಂಚಾಮೃತಾಭಿಷೇಕ, 8 ಪುಣ್ಯಾಹ ಕಳಶ ಸ್ಥಾಪನೆ, ಅಗ್ನಿಪ್ರತಿಷ್ಠೆ, ನಾಗದೋಷಕ್ಕೆ ಅಶ್ಲೇಷ ಪೂಜೆ, ಮಧ್ಯಾಹ್ನ ಆವಾಹಿತ ಅಮ್ಮನವರಿಂದ ಭಕ್ತಾಧಿಕಗಳ ಪ್ರಶ್ನೆಗಳಿಗೆ ಮುನಿಯಪ್ಪ ಸ್ವಾಮಿ ಉತ್ತರ ನೀಡಲಿದ್ದಾರೆ.ಲಕ್ಷ್ಮಮ್ಮ ನಿಧನ: ನಿವೃತ್ತ ತಹಸೀಲ್ದಾರ್ ನಾಗರಾಜು ಅವರ ತಾಯಿ ಲಕ್ಷ್ಮಮ್ಮಕೋಲಾರದಲ್ಲಿ ವಿಧಿವಶರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.