ಮಳೆಗೆ ಮಾವು ಬೆಳೆ ಹಾನಿ
ಮುಳಬಾಗಲು: ತಾಲೂಕಿನಾದ್ಯಂತ ಹಾಗೂ ಪಟ್ಟಣದ ಹತ್ತು ಕಿಮೀ ಅಸು-ಪಾಸು ಹಾಗೂ ತಾಯಲೂರು ಹೋಬಳಿ ಪ್ರಾಂತ್ಯದಲ್ಲಿ ಶುಕ್ರವಾರ ಸಂಜೆ 6 ಗಂಟೆಯ ವೇಳೆಯಲ್ಲಿ ದಾಖಲೆ ಮಳೆ ಸುರಿದಿದೆ. ಕಳೆದ ಹಲವಾರು ವರ್ಷಗಳಿಂದ ಜೂನ್ ತಿಂಗಳ ಅವಧಿಯಲ್ಲಿ 106.22 ಮಿಮೀ ಮಳೆ ಬಿದ್ದ ದಾಖಲೆ ಇರಲಿಲ್ಲ. ಆದರೆ, ಶುಕ್ರವಾರ ಸುರಿದ ಬಿರುಗಾಳಿ-ಗುಡುಗು ಸಹಿತ ಮಳೆ ಹಿಂದಿನ ಹಲವಾರು ವರ್ಷಗಳ ದಾಖಲೆ ಮುರಿದಿದೆ. ನಂತರ ಕ್ರಮವಾಗಿ ತಾಯಲೂರು, ಅವಣೆ ಹಾಗೂ ಬೈರಕೂರು ಹೋಬಳಿಗಳು ಮಳೆಯಲ್ಲಿ ದಾಖಲೆ ಮಳೆ ಬಿದ್ದರೆ, ದುಗ್ಗಸಂದ್ರ ಹೋಬಳಿಯಲ್ಲಿ ಹೇಳುಕೊಳ್ಳುವಂತಹ ಮಳೆ ಸುರಿದಿಲ್ಲ. ಈ ಮಳೆಯ ಕಾರಣ ಹಾಗೂ ಕಳೆದ ವಾರ ಬಂದ ಅಲಿಕಲ್ಲು ಮಳೆಯ ಕಾರಣವಾಗಿ ಕಸಬಾ,ಬೈರಕೂರು ಮತ್ತು ತಾಯಲೂರು ಹೋಬಳಿಗಳಲ್ಲಿ ಅತಿ ಹೆಚ್ಚಿನ ಮಾವಿನ ಫಸಲು ನಷ್ಟವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ.
ವೆಂಕಟಾದ್ರಿ ವೆಂಕಟ
ಶಿವಾರೆಡ್ಡಿ ಮತಯಾಚನೆ
ಚಿಂತಾಮಣಿ: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಜೂನ್ 20 ರಂದು ನಡೆಯುವ ಚುನಾವಣೆ ತಮಗೆ ಮೊದಲ ಪ್ರಾಶಸ್ತ್ಯ ಮತ ನೀಡುವ ಮೂಲಕ ಗೆಲ್ಲಿಸಿಕೊಡಬೇಕು ಪ್ರೋತ್ಸಾಹಿಸಬೇಕೆಂದು ವೆಂಕಟಾದ್ರಿ ಕಾಲೇಜಿನ ಅಧ್ಯಕ್ಷ ಎಂ.ಪಿ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.ರವರು ನಗರದ ಕನ್ನಿಕಾ ಮಹಲ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಅನೇಕ ಶಿಕ್ಷಕ, ಸ್ನೇಹಿತರ ವಿಶ್ವಾಸ ಗಳಿಸಿ ಪದವೀಧರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವ ನಾನು ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ವ್ಯಕ್ತಿಯಾಗಿದ್ದೇನೆ. ಈಗಾಗಿ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸುಧಾರಣೆ ಮಾಡಲು ಹಾಗೂ ನಿಮ್ಮ ಸಮಸ್ಯೆಗಳನ್ನು ಸರ್ಕಾರದ ಹಂತದಲ್ಲಿ ಕೆಲಸ ಮಾಡಲು ನನಗೆ ಬಹುಮತ ನೀಡಿ ಎಂದು ಮನವಿ ಮಾಡಿದರು.ಉಪನ್ಯಾಸಕರಾದ ರಾಮಸುಬ್ಬಾರೆಡ್ಡಿ, ಶಿಕ್ಷಕರಾದ ಸಿದ್ದಪ್ಪ, ವೆಂಕಟೇಶ್ವರರಾವ್, ಮುನಿಯಪ್ಪ ಸೇರಿದಂತೆ ನೂರಾರು ಶಿಕ್ಷಕರು ಸಭೆಯಲ್ಲಿ ಇದ್ದರು.