ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ನೀರಾವರಿ ಹೋರಾಟ ತೀವ್ರಗೊಳಿಸಲು ಹೆಚ್ಚಿದ ಒತ್ತಡ

Rashmi Kasaragodu
Updated On : 8 Jun 2014, 2:26 am

ಚಿಂತಾಮಣಿ: ಹಳ್ಳಿಯಿಂದ ದಿಲ್ಲಿಯವರೆಗೆ ಶಾಶ್ವತ ನೀರಾವರಿ ಹೋರಾಟವನ್ನು ತೀವ್ರಗೊಳಿಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆಗಾಗಿ ಹೋರಾಟ ಹಂತ ಹಂತವಾಗಿ ತೀವ್ರಗೊಳಿಸಲಾಗುವುದೆಂದು ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ ಸಲಹೆ ನೀಡದರು.ತಾಲೂಕಿನ ಶ್ರೀಕ್ಷೇತ್ರ ಕೈವಾರ ಯೋಗಿನಾರೇಯಣ ತಾತಯ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಪರಮಶಿವಯ್ಯ ವರದಿ ಜಾರಿಗೊಳಿಸಲು ಆಗ್ರಹಿಸಿ ಶಾಶ್ವತ ನೀರಾವರಿ ಹೋರಾಟ ಹಳ್ಳಿಯಿಂದ ದಿಲ್ಲಿಯವರೆಗೆ ತೀವ್ರಗೊಳಿಸಲು ಪ್ರತಿಯೊಬ್ಬರೂ  ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.ಶ್ರೀಕ್ಷೇತ್ರ ಕೈವಾರ ಯೋಗಿನಾರೇಯಣ ಮಠದ ಧರ್ಮಾಧಿಕಾರಿ  ಡಾ.ಎಂ.ಆರ್.ಜಯರಾಮ್ ಮಾತನಾಡಿದರು. ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ಅಗಲಗುರ್ಕಿ ಚಲಪತಿ,ತಾಲೂಕು ಅಧ್ಯಕ್ಷ ಲಕ್ಷ್ಮಣರೆಡ್ಡಿ, ನಾಗದೇನಹಳ್ಳಿ ನಾರಾಯಣಸ್ವಾಮಿ, ಊಲವಾಡಿ ಮುನಿನಾರಾಯಣಪ್ಪ, ಲಕ್ಷ್ಮಣ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು


ಪಾನಮತ್ತ ಗುಂಪಿನಿಂದವ್ಯಕ್ತಿ ಮೇಲೆ ಹಲ್ಲೆ


ಚಿಂತಾಮಣಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬಗೆ ಬಾಟಲಿಯಿಂದ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ತಿಮ್ಮಸಂದ್ರ ಬಡಾವಣೆಯ ಬಾರ್‌ವೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ.ನಗರದ ಕೋರ್ಟ್ ರಸ್ತೆ ಬಳಿ ಇರುವ ಶ್ರೀಶಾಂತ್ ಇ ಸ್ಟಾಂಪ್ ಹಾಗೂ ಜಿಲ್ಲಾ ಪತ್ರ ಬರಹಗಾರ ಕೊಂಡ್ರಹಳ್ಳಿ ಶ್ರೀನಿವಾಸ್ ಆತನ ಸಹಚರರು ಗುಂಪು ಕಟ್ಟಿಕೊಂಡು ನಗರದ ಹೊರ ವಲಯದ ತಿಮ್ಮಸಂದ್ರದ ಬಳಿ ಕುಡಿದ ಅಮಲಿನಲ್ಲಿ ಜೋಗ್ಯಾನಹಳ್ಳಿ ಶಿವಾರೆಡ್ಡಿ ಎಂಬವರ ಜೊತೆ ಕ್ಷುಲ್ಲಕ ಕಾರಣಕ್ಕಾಗಿ ಮಾತಿನ ಚಕಮಕಿ ನಡೆದು ಬಾಟಲಿಯಿಂದತಲೆಗೆ ಹೊಡೆದು ರಕ್ತಗಾಯಗಳಾಗಿವೆ. ಶಿವಾರೆಡ್ಡಿಯನ್ನು ಕೋಲಾರ ಎಸ್‌ಎನ್‌ಆರ್ ಆಸ್ಪತ್ರೆಗೆ ಸೇರಿಸಲಾಗಿದೆ.  ಜೋಗ್ಯಾನಹಳ್ಳಿ ಶಿವಾರೆಡ್ಡಿ ವಿರುದ್ಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಅನೇಕ ಪ್ರಕರಣಗಳು ಇವೆ. ಈತನು ಹಲವು ಅಧಿಕಾರಿಗಳನ್ನು ಧಮಕಿ ಹಾಕಿ ಕುಡಿತದ ಚಟಕ್ಕೆ ದಾಸನಾಗಿದ್ದ ಎನ್ನಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement