ಸರ್ಕಾರಿ ಅನುದಾನ ಬಳಸಿಕೊಂಡು ಅಭಿವೃದ್ಧಿ ಹೊಂದಿ: ಅಲ್ಪಸಂಖ್ಯಾತರಿಗೆ ಶಾಸಕರ ಕಿವಿಮಾತು
ಬಂಗಾರಪೇಟೆ: ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ಕೋಟ್ಯಂತರ ರು. ಬಿಡುಗಡೆ ಮಾಡುತ್ತಿದ್ದು ಬಡ ಅಲ್ಪಸಂಖ್ಯಾತರು ಅದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಅವರು ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಬಡ ಅಲ್ಪಸಂಖ್ಯಾತರು ಸ್ವಯಂ ಉದ್ಯೋಗ ಕೈಗೊಳ್ಳಲು 54 ಫಲಾನುಭವಿಗಳಿಗೆ ಸಹಾಯಧನದ ಚೆಕ್ ವಿತರಿಸಿ ಮಾತನಾಡುತ್ತಾ ಸರ್ಕಾರ ನೀಡಿರುವ ಹಣವನ್ನು ಮರಳಿ ಪಾವತಿಸಬೇಕಿಲ್ಲ. ಆಗಂತ ಈ ಹಣವನ್ನು ಯಾವುದೇ ದುರುಪಯೋಗ ಪಡಿಸಿಕೊಳ್ಳದಂತೆ ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಎಲ್ಲರಂತೆ ಸಮಾಜದಲ್ಲಿ ಗೌರವದಿಂದ ಬದುಕಬೇಕೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದು ಬಡ ಹೆಣ್ಣು ಮಕ್ಕಳ ಮದುವೆ ವೇಳೆ ಆರ್ಥಿಕ ಮುಗ್ಗಟ್ಟು ಬಾರದಿರಲು ಸರ್ಕಾರ ಶಾಧಿ ಭಾಗ್ಯ ಯೋಜನೆಯಡಿಯಲ್ಲಿ 50 ಸಾವಿರ ಅನುದಾನ ನೀಡುತ್ತಿದೆ. ಇದಲ್ಲದೆ ಹತ್ತು ಹಲವು ಯೋಜನೆಗಳನ್ನು ನೀಡಿದ್ದಾರೆ. ಬಡವ ಅಲ್ಪಸಂಖ್ಯಾತರು ತಮ್ಮ ಮನೆಗಳಲ್ಲಿಯೇ ಅಗರಬತ್ತಿ, ಕ್ಯಾಂಡಲ್ ತಯಾರಿಕೆ, ಸಣ್ಣ ವ್ಯಾಪಾರಕ್ಕೆ ಸಹಾಯವಾಗಲೆಂದು ನಿಗಮದಿಂದ ತಲಾ 20 ಸಾವಿರ ಅನುದಾನ ನೀಡುತ್ತಿರುವುದರಿಂದ ಅದನ್ನು ಉಪಯೋಗಿಸಿಕೊಂಡು ಉತ್ತಮ ಜೀವನ ನಡೆಸುವುಂತೆ ಹೇಳಿದರು. ಅಲ್ಲದೆ ಕ್ಷೇತ್ರದಲ್ಲಿರುವ ನಿವೇಶನ ಹರಿತ ಬಡ ಅಲ್ಪಸಂಖ್ಯಾತರಿಗೆ ಉಚಿತ ನಿವೇಶನ ನೀಡಿ ವಾಜಪೇಯಿ ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವುದಾಗಿಯೂ ತಿಳಿಸಿದರು. ಪುರಸಭೆ ಸದಸ್ಯ ಷಪಿ ಹಾಜರಿದ್ದರು.
ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗಿಡ ನೆಡುವ ಮೂಲಕ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.