ಸರ್ಕಾರಿ ಶಾಲೆಗೆ ನೀರು ಶುದ್ಧೀಕರಣ ಸಾಧನ
ಗೌರಿಬಿದನೂರು: ವಿಶ್ವ ಪರಿಸರ ದಿನದ ನೆನಪಿಗಾಗಿ ದೇಶದ ಮುಂಚೂಣಿ ಕೃಷಿ ಕಂಪೆನಿ ಮೊನ್ಸಾಂಟೋ ಇಂಡಿಯಾ, ಕಲ್ಲಿನಾಯಕನಹಳ್ಳಿ ಸರ್ಕಾರಿ ಶಾಲೆಗೆ ಆರ್ಒ ನೀರು ಶುದ್ಧೀಕರಣ ಸಾಧನ ಒದಗಿಸಿದೆ.ಕ್ಷೇತ್ರ ಶಿಕ್ಷಣಾಧಿಕಾರಿ ಬಯ್ಯಪ್ಪರೆಡ್ಡಿ ಶಾಲೆಯಲ್ಲಿ ಅಳವಡಿಸಲಾದ ನೂತನ ಸಾಧನ ಉದ್ಘಾಟಿಸಿ ಮಾತನಾಡಿ, ಕುಡಿಯುವ ನೀರಿನ ಸ್ಥಿತಿ ಸುಧಾರಿಸಲು ಮತ್ತು ಶೈಕ್ಷಣಿಕ ಸ್ಥಿತಿ ಅಭಿವೃದ್ಧಿ ಈ ನಿಟ್ಟಿನಲ್ಲಿ ಈ ಕಾರ್ಯ ಶ್ಲಾಘನೀಯ ಎಂದರು.ಅಂತರ್ಜಲ ಪ್ರಾಧಿಕಾರ ವಿಜ್ಞಾನಿ ದಿವಾಕರ್, ಗ್ರಾಮ ಪಂಚಾಯತ್ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಮೊನ್ಸ್ಯಾಂಟೊ ಸಿಬ್ಬಂದಿ, ಮತ್ತಿತರರು ಹಾಜರಿದ್ದರು.