ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಹಣ ದುರುಪಯೋಗ ಖಂಡಿಸಿ ಪ್ರತಿಭಟನೆ

Rashmi Kasaragodu
Updated On : 8 Jun 2014, 2:26 am

ಚಿಂತಾಮಣಿ: ಕೋಡೇಗಂಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಭಿವೃದ್ಧಿ ಹಣವನ್ನು ಮುಖ್ಯ ಶಿಕ್ಷಕ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಎಸ್‌ಡಿಎಂಸಿ ಅಧ್ಯಕ್ಷರ ನೇತೃತ್ವದಲ್ಲಿ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಲ್ಲದೆ, ಆರೋಪಿ ಮುಖ್ಯ ಶಿಕ್ಷಕನನ್ನು ಕೊಠಡಿಯಲ್ಲಿ ಕೂಡಿ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ. ಮುಖ್ಯ ಶಿಕ್ಷಕ ವೆಂಕಟಸ್ವಾಮಿ ಶಾಲೆ ಅಬಿವೃದ್ಧಿ ಹಣವನ್ನು ಬ್ಯಾಂಕ್ ಬ್ಯಾಂಕ್ ಖಾತೆಯಿಂದ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿರುವುದಾಗಿ ಆರೋಪಿಸಿ ಘೋಷಣೆ ಕೂಗಿದರು. ಮುಖ್ಯ ಶಿಕ್ಷಕ ವೆಂಕಟಸ್ವಾಮಿ ಸುಮಾರು ರು.1 ಲಕ್ಷ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದು, ಮುಖ್ಯ ಶಿಕ್ಷಕರು ಚಿಂತಾಮಣಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿರುವುದಾಗಿ ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಘವೇಂದ್ರ ಆರೋಪಿಸಿದರು. ಕವಿತ, ಸರಸ್ವತಮ್ಮ, ಶಿವಣ್ಣ, ರಾಧಮ್ಮ, ಗಂಗರತ್ನ, ವೆಂಕಟರವಣ,ರಾಮು ಇದ್ದರು.


'ಅನ್ನಭಾಗ್ಯ ಯೋಜನೆ ಅರ್ಹರಿಗೆ ತಲುಪಲಿ'



ಚಿಂತಾಮಣಿ: ಬಡವರಿಗೆ ಸರ್ಕಾರದಿಂದ ನೀಡುವ ಅನ್ನಭಾಗ್ಯ ಯೋಜನೆಯು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರಲು ಅರ್ಹ ಬಡ ಪಡಿತರ ಚೀಟಿದಾರರ ಕೈ ತಲುಪಿದರೆ ಮಾತ್ರ ಅನ್ನಭಾಗ್ಯ ಯೋಜನೆ ಸದ್ಬಳಕೆಯಾಗಲು ಸಾಧ್ಯವೆಂದು ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿ ಅಭಿಪ್ರಾಯಪಟ್ಟರು.  ನಗರದ ಅಂಜನಿ ಬಡಾವಣೆಯ ಕೆ.ಆರ್.ಜಯಪ್ರಕಾಶ್ ಡಿಪೋ 124ರಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಆಹಾರ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಹಾರ ನಿರೀಕ್ಷಕ ಪಿತಾಂಬರಂ ಮಾತನಾಡಿ, ಪ್ರತಿ ತಿಂಗಳು 7 ರಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ವತಿಯಿಂದ ಆಹಾರ ಅದಾಲತ್ ಹಮ್ಮಿಕೊಳ್ಳಲಾಗಿದೆ. ಆಯಾ ಪ್ರದೇಶ ವ್ಯಾಪ್ತಿಗೆ ಒಳಪಡುವ ನ್ಯಾಯಬೆಲೆ ಅಂಗಡಿ ಆವರಣದಲ್ಲಿ ಕುಂದು ಕೊರತೆ ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು.ಆಹಾರ ಶಿರಸ್ತೇದಾರ್ ಆರ್.ವಿಜಯ, ಆಹಾರ ನಿರೀಕ್ಷಕರಾದ ಮನೋಹರ್, ಡಿಪೋ ಮಾಲೀಕರಾದ ಚಲಪತಿ, ಕೊಂಡ್ರಹಳ್ಳಿ ಕುಮಾರಣ್ಣ ಸೇರಿದಂತೆ ಪಡಿತರ ಚೀಟಿದಾರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement