ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂಬೇಡ್ಕರ್ರನ್ನು ಒಪ್ಪಿಕೊಂಡರೆ ಸಮಷ್ಟಿ ಸಮಾಜ ನಿರ್ಮಾಣ

Rashmi Kasaragodu
Updated On : 9 Jun 2014, 1:55 am

ಕೋಲಾರ: ಕೆಳ ಸಮುದಾಯದವರು ಬುದ್ಧ, ಬಸವ, ಕೈವಾರ ತಾತಯ್ಯ, ಕುವೆಂಪು ಅವರನ್ನು ಒಪ್ಪಿಕೊಂಡಿರುವ ರೀತಿಯಲ್ಲಿ ಇತರೇ ವರ್ಗದ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮವ ಎಂದು ಒಪ್ಪಿಕೊಂಡಲ್ಲಿ ಸಮಾಜ ಬದಲಾಗುತ್ತದೆ ಎಂದು ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಪ್ರತಿಪಾದಿಸಿದರು. ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಭಾನುವಾರ ಸಂಜೆ ಹೋರಾಟ ಸಾರಥಿ ಟಿ.ವಿಜಯಕುಮಾರ್ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, 'ದಲಿತರಷ್ಟೇ ಅಲ್ಲದೆ ಅಂಬೇಡ್ಕರ್ ಅವರನ್ನು ಇತರೆ ಸಮುದಾಯದವರು ಒಪ್ಪಿಕೊಳ್ಳದಿದ್ದರೆ ಸಮಷ್ಟಿ ಸಮಾಜ ನಿರ್ಮಾಣ ಅಸಾಧ್ಯವೆ' ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ದಲಿತ ಚಳುವಳಿಯ ನೆನಪುಗಳನ್ನು ಬಿಚ್ಚಿಟ್ಟರು. ಮೈಲಾರ ಲಿಂಗೇಶ್ವರನ ಹಾಗೂ ಬಿದಿರು ಕುರಿತ ಎರಡು ಸೊಗಸಾದ ಹಾಡುಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸಿ.ಎಂ.ಮುನಿಯಪ್ಪ, ಮುನಿಸ್ವಾಮಿ, ಬಂಗವಾದಿ ನಾರಾಯಣಪ್ಪ, ಟಿ.ವಿಜಯಕುಮಾರ್ ಕೃತಿ ರಚನೆಕಾರ ಅವಣಿ ಕಾಶಿ, ಪ್ರಸಾದ್, ಪ್ಲೆಕ್ಸ್ ನಾರಾಯಣಸ್ವಾಮಿ, ಗೀತಾ, ಪ್ರಭಾವತಿ, ಡಾ.ಶಿವಪ್ಪ ಅರಿವು, ಪಂಡಿತ್ ಮುನಿವೆಂಕಟಪ್ಪ ಇನ್ನಿತರರು ಇದ್ದರು.


ವಿಶ್ವ ಪರಿಸರ ದಿನಾಚರಣೆ
ತಿಪಟೂರು: ತಾಲೂಕಿನ ಕೊನೇಹಳ್ಳಿ ಬಿದರೆಗುಡಿ ಕಾವಲ್ನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಕೇಂದ್ರದ ಮುಖ್ಯಸ್ಥರಾದ ಡಾ.ಜಿ.ಎಂ.ಸುಜಿತ್ ವಹಿಸಿ ಪರಿಸರ ದಿನದ ಪ್ರಾಮುಖ್ಯತೆ, ಪ್ರಸ್ತುತ ಪರಿಸರದ ಸಮಸ್ಯೆಗಳು, ಕಾರಣಗಳು ಹಾಗೂ ಅನವುಗಳ ನಿಯಂತ್ರದ ಕುರಿತು ವಿವರಿಸಿದರು. ಜಾನುವಾರು ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಪ್ರಾಧ್ಯಾಪಕರಾದ ಡಾ.ಸಿದ್ದಲಿಂಗ ಮೂರ್ತಿ ಮತ್ತು ಡಾ. ಪ್ರಸನ್ನಕುಮಾರ್, ಗೋಪಾಲನಹಳ್ಳಿ ಜಿ.ಎಸ್.ರಘು ಮಾತನಾಡಿದರು. ಕೇಂದ್ರದ ವಿಜ್ಞಾನಿಗಳಾದ ಡಾ.ಶ್ರೀನಿವಾಸ್, ಡಾ.ಮಮತಾ, ಡಾ.ಶಿವಪ್ಪನಾಯಕ ಸೇರಿದಂತೆ ಸುಮಾರು 100ಜನ ಪಶು ಸಂಗೋಪನೆ, ಪಾಲಿಟೆಕ್ನಿಕ್ ಕಾಲೇಜು, ಕೊನೇಹಳ್ಳಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ.ಶಂಕರ್ ನಿರೂಪಿಸಿ, ಡಾ.ರೂಪ ಬಿ. ಪಾಟೀಲ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement