ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಪಂ ಸ್ಥಾಯಿ ಸಮಿತಿ ಸಭೆ ರದ್ದು

Rashmi Kasaragodu
Updated On : 9 Jun 2014, 1:54 am

ಮುಳಬಾಗಲು: ಕೋರಂ ಕೊರತೆಯಿಂದಾಗಿ ತಾಪಂ ಸ್ಧಾಯಿ ಸಮಿತಿ ಸಭೆಯನ್ನು ಮುಂದೂಡಲಾಯಿತು.  ಅಧ್ಯಕ್ಷೆ ಸುಬ್ಬಮ್ಮ ಅಪ್ಪಿ ಅಧ್ಯಕ್ಷೆತೆಯಲ್ಲಿ ಹಣಕಾಸು ಮತ್ತು ಸಾಮಾನ್ಯ ಸ್ಧಾಯಿ ಸಮಿತಿ ಸಭೆ ಕರೆಯಲಾಗಿತ್ತು. ಸದಸ್ಯರು ಹಾಜರಾಗದ ಕಾರಣ ಜೂ.12ಕ್ಕೆ ಮುಂದೂಡಲಾಯಿತು. ಎಂ.ರಾಜಪ್ಪ ಅಧ್ಯಕ್ಷತೆಯಲ್ಲಿ  ಕರೆಯಲಾಗಿದ್ದ ಲೆಕ್ಕ ಪರಿಶೋಧನ ಸ್ಥಾಯಿ ಸಮಿತಿ ಸಭೆಗೆ ಪಿ.ವಿ.ಶ್ರೀರಾಮರೆಡ್ಡಿ ಶ್ರೀರಾಮಪ್ಪ ಹಾಜರಾಗಿದ್ದರು. ಸಂಜೆ ಸಾಮಾಜಿಕ ಮತ್ತು ನ್ಯಾಯ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷ ಎಂ.ಎಸ್.ಶ್ರೀನಿವಾಸ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದು, ಸಭೆ ಮುಂದೂಡಲಾಯಿತು.


ಚಿಕ್ಕಬಳ್ಳಾಪುರದಲ್ಲಿ ಪರಿಸರ ದಿನಾಚರಣೆ
ಚಿಕ್ಕಬಳ್ಳಾಪುರ: ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಬಿ.ಬಿ. ರಸ್ತೆ ನಡುವಿನ ವಿದ್ಯುತ್ ದೀಪಗಳ ವಿಭಜಕದ ನಡುವೆ ಗಿಡಗಳನ್ನು ಬೆಳೆಸಲು ನಗರಸಭೆ ಮುಂದಾಗಿದ್ದು ಇದಕ್ಕೆ ಶಾಸಕ ಕೆ. ಸುಧಾಕರ್ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿದರು.  ನಗರದ ಬಿ.ಬಿ. ರಸ್ತೆ ಜೋಡಿ ರಸ್ತೆಯ ಮಧ್ಯೆದಲ್ಲಿ ಸೋಲಾರ್ ದೀಪಗಳನ್ನು ಅಳವಡಿಸಿರುವುದರ ನಡುವೆ ಬಗೆಬಗೆಯ ಗಿಡಗಳನ್ನು ನೆಡಲಾಗುತ್ತಿದ್ದು ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ಹಿಡಿದು ವಾಪಸಂದ್ರದವರೆಗೂ ಗಿಡಗಳನ್ನು ಬೆಳೆಸುವ ಕಾರ್ಯವನ್ನು ಕೈಗೊಳ್ಳಲಾಯಿತು.
ಶಾಸಕ ಕೆ. ಸುಧಾಕರ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಜಬೀನ್ ತಾಜ್, ಸದಸ್ಯರಾದ ಗಜೇಂದ್ರ, ಕಿಸಾನ್ ಕೃಷ್ಣಪ್ಪ, ಶ್ರೀನಾಥ್ ಮುಂತಾದವರು ಉಪಸ್ಥಿತರಿದ್ದರು.  


ಇಂಟರ್ನೆಟ್ ಸರಿ ಮಾಡಿ
ಮುಳಬಾಗಲು: ಬಿಎಸ್ಎನ್ಎಲ್ ಅಂತರ್ಜಾಲ ಸಂಪರ್ಕ ದೋಷದಿಂದ ತಾಲೂಕಿನ ಕಾಶೀಪುರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಗ್ರಾಹಕರು ಒಂದು ತಿಂಗಳಿಂದ ಅಲೆದಾಡುವಂತಾಗಿದೆ. 2-3 ನಿಮಿಷಕ್ಕೆ ಅಂತರ್ಜಾಲ ಕಡಿತಗೊಳ್ಳುವ ಕಾರಣ ಬ್ಯಾಂಕ್ ವ್ಯವಹಾರ ಮಂದಗತಿಯಲ್ಲಿ ಸಾಗುತ್ತಿದೆ. ವಹಿವಾಟು ನಡೆಸಲು ಗ್ರಾಹಕರು ಪದೇ ಪದೇ ಅಲೆದಾಡುವಂತಾಗಿದೆ. ಇಂಟರ್ನೆಟ್ ದೋಷ ನಿವಾರಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಹೊನಗಾನಹಳ್ಳಿ ಗ್ರಾಮದ ಗ್ರಾಹಕರಾದ ಬ್ಯಾಟಪ್ಪ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement