ತಾಲೂಕು ಸಮ್ಮೇಳನಅಧ್ಯಕ್ಷರಿಗೆ ಆಹ್ವಾನ
ಮಾಲೂರು: ಜೂ.13ರಂದು ಬಂಗಾರಪೇಟೆಯ ಬೇತಮಂಗಲದಲ್ಲಿ ನಡೆಯಲಿರುವ 8ನೇ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖ್ಯಾತ ಜನಪದ ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್ ರವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಅವರ ಸ್ವಗೃಹಕ್ಕೆ ತೆರಳಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಪಟ್ಟಣದ ರೇಲ್ವೆ ನಿಲ್ದಾಣ ಬಳಿ ಇರುವ ರಾಜ್ಯ ಸರ್ಕಾರದ ಜಾನಪದ ಕಲಾ ಅಕಾಡೆಮೆ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್ ಮನೆಗೆ ಕಸಾಪ ಜಿಲ್ಲಾಧ್ಯಕ್ಷ ಜೆ.ಜಿ.ನಾಗರಾಜ್ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ತೆರಳಿ ಪಿಚ್ಚಹಳ್ಳಿ ಅವರನ್ನು ಮನೆಯಲ್ಲಿ ಸನ್ಮಾನಿಸಿದರಲ್ಲದೇ ಬಂಗಾರಪೇಟೆ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ ವಹಿಸಿ ನೆಡೆಸಿಕೊಡುವಂತೆ ಆಹ್ವಾನ ನೀಡಿದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಅಶ್ವತ್ಥರೆಡ್ಡಿ, ಎಂ.ವಿ.ಜನಾರ್ದನ್, ಕೋಶಾಧ್ಯಕ್ಷ ಪುರುಷೋತ್ತಮ, ಮಾಲೂರು ಕಸಾಪ ಅಧ್ಯಕ್ಷ ಎಂ.ಜಿ.ಮಧುಸೂಧನ್, ಬಂಗಾರಪೇಟೆ ಕಸಾಪ ಅಧ್ಯಕ್ಷ ಅಶ್ವತ್ಥ್, ಬದ್ರಿನಾಥ್, ಕೆಜಿಎಫ್ ಕಸಾಪ ಅಧ್ಯಕ್ಷ ವೀರ ವೆಂಕಟಪ್ಪ, ಬೇತಮಂಗಲ ಕಸಾಪ ಅಧ್ಯಕ್ಷ ವಿಜಯ ಕುಮಾರ್ ಇದ್ದರು.