ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಮಾನತೆ ಬಯಸುವ ಪ್ರಕೃತಿ ಮಾನವನ ಸ್ವಾರ್ಥಕ್ಕೆ ನಾಶ

Rashmi Kasaragodu
Updated On : 9 Jun 2014, 1:55 am

ಚಿಂತಾಮಣಿ: ಸಮಾನತೆಯನ್ನು ಬಯಸುವ ಪ್ರಕೃತಿ ಇಂದು ಮಾಯವಾಗುತ್ತಿದೆ. ಎಚ್ಚರ ತಪ್ಪಿದರೆ ನಾವೂ ಮಾಯವಾಗುತ್ತೇವೆ. ಪಂಚಭೂತಗಳ ಕರುಣೆಯಿಂದ ನಾವು ಉಸಿರಾಡುತ್ತಿದ್ದೇವೆ. ಬದುಕುತ್ತಿದ್ದೇವೆ. ಇವನ್ನು ನಿರ್ಲಕ್ಷಿಸಿದರೆ ಅದೇ ನಮಗೆ ಮಾರಣಾಂತಿಕವಾಗಲಿ ಎಂದು ಪ್ರಾಂಶುಪಾಲ ಎನ್.ವಿ.ವೆಂಕಟಶಿವಾರೆಡ್ಡಿ ಎಚ್ಚರಿಸಿದರು. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ವಿವೇಕಾನಂದ ಪಪೂ ಕಾಲೇಜಿನಲ್ಲಿ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಆಯೋಜಿಸಿದ್ದ ರಸಗ್ರಹಣ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಪರಿಸರ ಶುದ್ಧ ವಿಶಾಲ ವಸ್ತ್ರ. ಆದರೆ ಅದನ್ನು ನಾವು ಧರಿಸುವ ಬಟ್ಟೆಯಂತೆ ಚೂರು ಚೂರು ಮಾಡಿ ವಿಕೃತಿಗೊಳಿಸಿ ಬಿಸಾಡುವ ವಸ್ತ್ರದಂತೆ ಮಾಡುತ್ತಿರುವುದು ನಾಗರಿಕ ಸಮಾಜದ ಅವನತಿಗೆ ದಾರಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕವಿ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ಮಾತನಾಡಿದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ, ಜನಪದ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ತಂಡದವರಿಂದ ಪರಿಸರ ಮತ್ತು ಜನಪದ ಗೀತೆಗಳ ಗಾಯನ ನಡೆಯಿತು. ತಂಡದಲ್ಲಿ ಗಾಯಕರಾಗಿ ಕೀರ್ತಿ ಬಸಪ್ಪ ಲಗಳಿ, ಜಿ.ಈಶ್ವರಪ್ಪ, ತಬಲ ವಾದಕರಾಗಿ ಎಚ್.ಎಂ.ರಾಮಾಂಜನಪ್ಪ ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement