ಡೊನೇಷನ್: ಪ್ರತಿಭಟನೆ
ಕೋಲಾರ: ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರೈತ ಸಂಘದಿಂದ ಸೋಮವಾರ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ಅಧಿಕಾರಿಗಳು ಸರ್ಕಾರದ ಆದೇಶ ಪಾಲಿಸದಿದ್ದರೆ ಖಾಸಗಿ ಶಾಲೆಗಳಿಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು. ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಬಂಗವಾದಿ ನಾಗರಾಜಗೌಡ, ಮುಖಂಡರಾದ ಹೂವಳ್ಳಿ ನಾಗರಾಜ್, ಮೂರಂಡಹಳ್ಳಿ ಶಿವಾರೆಡ್ಡಿ, ರಂಜಿತ್‌ಕುಮಾರ್, ಬಂಗವಾದಿ ನಾಗರಾಜಗೌಡ, ನೀಲಕಂಠಪುರ ಮುನೇಗೌಡ ಪ್ರತಿಭಟನೆಯಲ್ಲಿ ಇದ್ದರು. ಮನವಿ ಸ್ವೀಕರಿಸಿದರು.
ಬಿಆರ್‌ಪಿ, ಸಿಆರ್‌ಪಿ ಕೌನ್ಸೆಲಿಂಗ್
ಕೋಲಾರ: ಜಿಲ್ಲೆಯಲ್ಲಿ ಬಿಆರ್‌ಪಿ ಹಾಗೂ ಸಿಆರ್‌ಪಿ ಹುದ್ದೆಗಳಿಗೆ ಅರ್ಹ ಶಿಕ್ಷಕರ ಸ್ಥಳ ನಿಯುಕ್ತಿಗಾಗಿ ಜೂ.11ರಂದು ಮಧ್ಯಾಹ್ನ 2.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತಿದೆ ಎಂದು ಉಪ ನಿರ್ದೇಸಕ ಎಸ್.ವಿ.ಪದ್ಮನಾಭ್ ತಿಳಿಸಿದ್ದಾರೆ. 2012 ಮೇ ಹಾಗೂ ಅಕ್ಟೋಬರ್‌ನಲ್ಲಿ ನಡೆಸಲಾದ ಸಿಆರ್‌ಪಿ, ಬಿಆರ್‌ಪಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದು, ಉಳಿಕೆ ಜೇಷ್ಠತಾ ಪಟ್ಟಿ ಆಧಾರದ ಮೇಲೆ ಈ ಕೌನ್ಸಿಲಿಂಗ್ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ವೃದ್ಧ ದಂಪತಿಗೆ ಸನ್ಮಾನ
ಚಿಂತಾಮಣಿ: ಕನ್ನಡ ಜಾಗೃತಿ ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಮಂಜುನಾಥ್(ದೇವಾ) ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿಂತಾಮಣಿ ತಾಲೂಕು ಕನ್ನಡ ಜಾಗೃತಿ ವೇದಿಕೆ ವತಿಯಿಂದ ವೃದ್ಧ ದಂಪತಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ದೊಡ್ಡಗಂಜೂರು ಶ್ಯಾಮರಾವ್, ಅಕ್ಕುಬಾಯ್ ದಂಪತಿಗೆ ಸನ್ಮಾನ ಮಾಡಿ, ಕುಟುಂಬಕ್ಕೆ ನೆರವು ನೀಡುವ ವಾಗ್ದಾನವನ್ನು ತಾಲೂಕು ಅಧ್ಯಕ್ಷ ಆರ್.ನಾಗಾರಾಜ್ ಮಾಡಿದರು. ಎಂ.ವಿ.ನಾಗರಾಜ್, ಎಸ್.ವಿ. ಮಂಜು ಭಾರ್ಗವಿ, ಶ್ರೀರಾಮ ನಗರ ಶಂಕರ್, ತಿಮ್ಮಸಂದ್ರ ದೇವರಾಜ್, ಆರ್.ಆರ್.ಮಂಜುನಾಥಗೌಡ ಮತ್ತಿತರು ಇದ್ದರು.