ದಸಂಸ ಪುನರ್ ಸಂಘಟನೆ ಅಗತ್ಯ: ಸಿ.ಎಂ. ಮುನಿಯಪ್ಪ
ಕೋಲಾರ: ಹಾದಿ ತಪ್ಪಿರುವ ದಲಿತ ಚಳವಳಿಯನ್ನು ಸರಿ ದಾರಿಯಲ್ಲಿ ಕೊಂಡೊಯ್ಯಬೇಕಾದ ಅನಿವಾರ್ಯತೆ ಇದೆ. ದಲಿತ ಸಂಘರ್ಷ ಸಮಿತಿಯನ್ನು ಪುನರ್ಸಂಘಟಿಸಬೇಕಾಗಿದೆ ಎಂದು ಹಿರಿಯ ದಲಿತ ಮುಖಂಡ ಸಿ.ಎಂ. ಮುನಿಯಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಸಂಸ ಸಂಸ್ಥಾಪಕ ದಿ. ಪ್ರೊ.ಬಿ. ಕೃಷ್ಣಪ್ಪನವರ 76ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಎನ್. ಮುನಿಸ್ವಾಮಿ ನಾಗಸಂದ್ರ, ಬಿ.ಎನ್. ಗಂಗಾಧರಪ್ಪ, ಗಡ್ಡಂ ಎನ್. ವೆಂಕಟೇಶ್, ಎಂ.ಚಂದ್ರಶೇಖರ್, ಡಿಪಿಎಸ್ ಮುನಿರಾಜು, ಹಾರೋಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು. ಸೂಲಿಕುಂಟೆ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಅಶೋಕ ಕುಮಾರ್, ದೊಡ್ಡಿ ಮುನಿಯಪ್ಪ ಸೇರಿ ಅನೇಕರಿದ್ದರು.