ನೆರವಿಗೆ ಅರ್ಜಿ ಆಹ್ವಾನ
ಕೋಲಾರ: 2014-15ನೇ ಸಾಲಿನಲ್ಲಿ ವ್ಯಾಸಂಗ ಮುಂದುವರೆಸಲು ಆರ್ಥಿಕ ನೆರವು ಇಚ್ಛಿಸುವ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಂದ ನಗರದ ಶ್ರೀಪತಂಜಲಿ ಯೋಗಶಿಕ್ಷಣ ಸಮಿತಿ ಅರ್ಜಿ ಆಹ್ವಾನಿಸಿದೆ. ಪಿಯುಸಿ ಮೇಲ್ಪಟ್ಟು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅರ್ಹ ಬಡ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳು ನಗರದ ರೇಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಪತಂಜಲಿ ಯೋಗವುಂದಿರದಲ್ಲಿ ಬೆಳಗ್ಗೆ 6.30ರಿಂದ 8 ಗಂಟೆ ಹಾಗೂ ಸಂಜೆ 5.30ರಿಂದ 7 ಗಂಟೆವರೆಗೂ ವಿತರಿಸಲಾಗುತ್ತಿದೆ. ಭರ್ತಿಯಾದ ಅರ್ಜಿಗಳನ್ನು ಜೂ.25ರೊಳಗೆ ವಾಪಸ್ ನೀಡಬೇಕು. ಹೆಚ್ಚಿನ ಮಾಹಿತಿಗೆ ಎಸ್.ವಿ.ವೇಣುಗೋಪಾಲ್-9448310320, ಮಂಜುಳಮ್ಮ-8453600992, ವಿಜಯಮ್ಮ-9141441729 ಸಂಪರ್ಕಿಸಬಹುದು.