ಪ್ಯಾಸೆಂಜರ್ ರೈಲಿನಲ್ಲಿ ಶಾರ್ಟ್ ಸರ್ಕಿಟ್ ಪ್ರಯಾಣಿಕರ ಆತಂಕ
ಗೌರಿಬಿದನೂರು: ಯಶವಂತಪುರ ಪ್ಯಾಸೆಂಜರೆ ರೈಲು ತಾಲೂಕಿನ ಚಿಕ್ಕಕುರುಗೊಡು ಬಳಿ ಇಂಜಿನ್ ಸಿಬ್ಬಂದಿಯ ಬೋಗಿಯಲ್ಲಿ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಕಿ ಶಬ್ದ ಬಂದಿದ್ದು ತಕ್ಷಣ ರೈಲಿನಲ್ಲಿದ್ದ ಪ್ರಯಾಣಿಕರು ರೈಲನ್ನು ನಿಲ್ಲಿಸಲು ಜೋರಾಗಿ ಚೈನ್ ಎಳೆದಿದ್ದರಿಂದ ಹೆಚ್ಚು ಶಬ್ದದೊಂದಿಗೆ ರೈಲು ನಿಲ್ಲಿತು. ಈ ಸದ್ದಿನಿಂದ ಪ್ರಯಾಣಿಕರು ಬಾಂಬ್ ಎಂದು ಆತಂಕಕ್ಕೀಡಾಗಿ ರೈಲಿನಿಂದ ಜಿಗಿದರು. ರೈಲು ನಿಂತ ತಕ್ಷಣ ಮಕ್ಕಳನ್ನು ಹೊರಗೆ ತಳ್ಳಿ ತಾವೂ ಕಳೆಗಿಳಿದರು.
ತದ ನಂತರ ರೈಲ್ವೆ ಅಧಿಕಾರಿಗಳು ಪರೀಶೀಲಿಸಿದಾಗ ರೈಲಿನಲ್ಲಿ ಆಳವಡಿಸಿದ್ದ ಫ್ಯಾನಿನ ವೈರುಗಳಲ್ಲಿ ಶಾರ್ಟ್ ಸರ್ಕೀಟ್ನಿಂದ ಅವಘಡ ಸಂಭವಿಸಿರುವುದು ಎಂದು ತಿಳಿದು ಬಂತು. ಆ ವೇಳೆಗಾಗಲೇ ರೈಲಿನಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ರೈಲು ಪ್ರಯಾಣ ಬೇಡವೆಂದು ನಿರ್ಧರಿಸಿ ಬಸ್ ಮೂಲಕ ಪ್ರಯಾಣ ಬೆಳೆದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರೈಲನ್ನು ನಿಲ್ಲಿಸಿ ತದನಂತರ ಹಿಂದೂಪುರದ ಕಡೆಗೆ ಪ್ರಯಾಣ ಬೆಳಸಿತು. ಗ್ರಾಮಾಂತರ ಪೊಲೀಸ್ ಠಾಣೆ ಎಸ್.ಐ. ಶಿವಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರಿಗೆ ಧೈರ್ಯ ತುಂಬಿ ಸಮಾಧಾನ ಪಡಿಸಿದರು.
ಚೋಳನಗುಂಟೆಯಲ್ಲಿ ಕೊಲೆ
ಮುಳಬಾಗಲು: ತಾಲೂಕಿನ ಚೋಳನಗುಂಟೆ ಗ್ರಾಮದಲ್ಲಿ ಕಳೆದ ರಾತ್ರಿ ಮಹಿಳೆಯೊಬ್ಬರ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆಯಾದ ಮಹಿಳೆ ಶಾಂತಮ್ಮ ಎಂದು ಗುರ್ತಿಸಲಾಗಿದ್ದು, ಹೆಚ್ಚಿನ ವಿವರಗಳು ತಿಳಿದು ಬಂದಿಲ್ಲ, ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.