ಬ್ಯಾಂಕ್ ವ್ಯವಸ್ಥಾಪಕರಿಗೆ ಬೀಳ್ಕೊಡುಗೆ
ಚಿಂತಾಮಣಿ: ಕೈವಾರ ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ರಂಗನಾಥ್ ಅವರಿಗೆ ಬೀಳ್ಕೊಡುಗೆಯನ್ನು ಶ್ರೀ ಸ್ವಾಮಿ ವಿವೇಕಾನಂದ ಮಿತ್ರ ಬಳಗ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಸನ್ಮಾನ ಸಮಾರಂಭವನ್ನು ಶ್ರೀ ಸ್ವಾಮಿ ವಿವೇಕಾನಂದ ಮಿತ್ರರ ಬಳಗ ಆಯೋಜಿಸಿತ್ತು. ಈ ವೇಳೆ, ಬಳಗದ ಕಾರ್ಯದರ್ಶಿ ಜಿ.ಎ.ಬಾಲಾಜಿ ಮಾತನಾಡಿ, ಇಲ್ಲಿನ ಶಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದ ರೀತಿಯಲ್ಲೇ ಮುಂದಿನ ಶಾಖೆಗಳಲ್ಲಿಯೂ ಅವರು ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು. ಈ ವೇಳೆ, ಜಿ.ನಾರಾಯಣಸ್ವಾಮಿ, ಟಿ.ಕೆ.ಮೋಹನ್, ಬ್ಯಾಂಕಿನ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.