ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರಸ್ತೆ ಡಾಂಬರೀಕರಣಕ್ಕೆ ಆಗ್ರಹ, ಮನವಿ ಸಲ್ಲಿಕೆ

Rashmi Kasaragodu
Updated On : 10 Jun 2014, 1:23 am

ಚಿಂತಾಮಣಿ: ಚೇಳೂರು ವೃತ್ತದಲ್ಲಿನ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಮುರುಗಮಲ್ಲ ಜೆ.ಮುಸ್ತಾಫ್, ಚಿಂತಾಮಣಿ ನಗರದಲ್ಲಿಯೇ ಅತಿ ಜನಸಂದಣಿ ಹೊಂದಿರುವ ಪ್ರದೇಶ ಚೇಳೂರು ವೃತ್ತ ಹಾಗೂ ರಸ್ತೆಯಾಗಿದೆ. ಈ ರಸ್ತೆಯು ತುಂಬಾ ಚಿಕ್ಕದಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಕಿರಿ ಕಿರಿಯುಂಟಾಗಿದೆ. ರಸ್ತೆಯಲ್ಲಿ ಈ ಹಿಂದೆ ಅನೇಕ ಅಪಘಾತಗಳು ಸಹ ಸಂಭವಿಸಿವೆ. ಕೂಡಲೇ ರಸ್ತೆ ರಿಪೇರಿ ಮಾಡಬೇಕು ಎಂದು ಆಗ್ರಹಿಸಿ ಲೋಕೋಪಯೋಗಿ ಇಲಾಖೆ ಅಭಿಯಂತರ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು. ಊಲವಾಡಿ ಮುನಿನಾರಾಯಣಪ್ಪ, ಎನ್.ಗಂಗರಾಜು, ಇಮ್ರಾನ್ ಪಾಷ, ಇಲಿಯಾಜ್ ಖಾನ್, ಎನ್.ವೆಂಕಟೇಶ್ ಬಾಬು, ತುಳಸಿ ವರ್ದನ್, ಆಸೀಫ್ ಸೇರಿ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement