ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವ್ಯಕ್ತಿಯ ಬೆಳವಣಿಗೆಗೆ ಉತ್ತಮ ಶಿಕ್ಷಣ ಅಗತ್ಯ

Rashmi Kasaragodu
Updated On : 10 Jun 2014, 1:25 am

ಕುಣಿಗಲ್: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಮತ್ತು ರಾಷ್ಟ್ರದ ಮುನ್ನಡೆಗೆ, ಈ ದೇಶದ ಸಂಸ್ಕೃತಿ, ಸಂಸ್ಕಾರಗಳ ಅಂಶಗಳನ್ನು  ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿದಂತಹ ಶಿಕ್ಷಣ ಅಡಿಪಾಯವಾಗಬೇಕಿದೆ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು. ಶನಿವಾರ, ತಾಲೂಕಿನ ಗಿರಿಗೌಡನಪಾಳ್ಯದಲ್ಲಿನ ಅರವಿಂದ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಪ್ರಪ್ರಥಮವಾಗಿ ಶೈಕ್ಷಣಿಕ ಜೀವನಕ್ಕೆ ಕಾಲಿಟ್ಟ ಮಾಂಟೆಸ್ಸರಿ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲಾ ಸಂಸ್ಥೆಯ ಅಧ್ಯಕ್ಷ ಎಂ.ಕೆ. ಅಶೋಕ್  ಅಧ್ಯಕ್ಷತೆ ವಹಿಸಿದ್ದು,  ಪ್ರಾಚಾರ್ಯೆ ಅನಿತಾ ಭಾಟಿಯಾ, ಪ್ರಮುಖರಾದ ಡಾ.ಕೃಷ್ಣೆಗೌಡ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement