ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೋಗಿಗಳಿಗೆ ಹಣ್ಣು ವಿತರಣೆ

Rashmi Kasaragodu
Updated On : 11 Jun 2014, 2:22 am

ಕೆಜಿಎಫ್: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ಜನ್ಮದಿನಾಚರಣೆ ಅಂಗವಾಗಿ ಕೆಜಿಎಫ್ ಘಟಕದ ಕರವೇ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸಿದರು.ಈ ವೇಳೆ ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಪ್ರಕಾಶ್ ಹಾಗೂ ತಾಲೂಕು ಅಧ್ಯಕ್ಷ ಎಸ್.ನಂಜುಂಡಪ್ಪ ಮಾತನಾಡಿದರು.ಇದೇ ವೇಳೆ, ರಾಬರ್ಟ್‌ಸನ್ ಪೇಟೆ ಪೊಲೀಸ್ ಠಾಣೆ ಸಿಪಿಐ ಲಕ್ಷ್ಮೀನಾರಾಯಣ ಹಾಗೂ ಪಿಎಸ್‌ಐ ರಂಗಶಾಮಯ್ಯ ಅವರನ್ನು ಸನ್ಮಾನಿಸಲಾಯಿತು. ಕರವೇ ಕಾರ್ಯಕರ್ತರಾದ ಕೆ. ಗೋಪಾಲ್, ತಿಮ್ಮರಾಜು, ಸೀನಪ್ಪ, ಸುರೇಶ್‌ಕುಮಾರ್, ಬಾಬು, ಮಹೇಶ್‌ಕುಮಾರ್ ಹಾಜರಿದ್ದರು.
ಯುವಕ ಆತ್ಮಹತ್ಯೆ
ಕೆಜಿಎಫ್: ಹೊಟ್ಟೆ ನೋವು ತಾಳಲಾರದೆ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಾರಿಕುಪ್ಪಂ ನಿವಾಸಿ ರಾಜೇಶ್(22) ಆತ್ಮಹತ್ಯೆ ಮಾಡಿಕೊಂಡವ. ರಾಜೇಶ್ ಬೆಂಗಳೂರಿನಲ್ಲಿ ದಿನ ಕೂಲಿ ಕೆಲಸ ಮಾಡಿಕೊಂಡಿದ್ದು, ಈತನಿಗೆ ಆಗಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿದರೂ ನೋವು ವಾಸಿಯಾಗಿರಲಿಲ್ಲ. ಇದರಿಂದ ಬೇಸತ್ತು ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಅಪಹರಣಕಾರನ ಬಂಧನ
ಮುಳಬಾಗಲು: ಮಾರುತಿ ನಗರದ ಬಡಾವಣೆಯಿಂದ ಮೇ 3ರಂದು ಯುವತಿ ಅಪಹರಿಸಿದ ಆರೋಪಿಯನ್ನು ಮುಳಬಾಗಲು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿ ಹರೀಶ್ ಇದೇ ಬಡಾವಣೆಯವ. ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಅಪಹರಿಸಿ ದೊಡ್ಡಬಳ್ಳಾಪುರದಲ್ಲಿ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿಯ ಪೋಷಕರು ಮುಳಬಾಗಲು ಪೊಲೀಸು ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸಿಪಿಐ ಕೃಷ್ಣಪ್ಪ ಅವರ ತಂಡ ಆರೋಪಿಯನ್ನು ಬಂಧಿಸಿದೆ. ಬಾಲಕಿಯನ್ನು ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ.


15ಕ್ಕೆ ಪ್ರತಿಭಾ ಪುರಸ್ಕಾರ
ಚಿಂತಾಮಣಿ: ಚಿಂತಾಮಣಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಶ್ರೀರಾಮ ಮಂದಿರ ರಸ್ತೆ,ಎನ್.ಆರ್.ಬಡಾವಣೆ ಇದರ ಆಶ್ರಯದಲ್ಲಿ 5ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂ.15ರಂದು ನಗರದ ಶ್ರೀ ಬ್ರಹ್ಮಚೈತನ್ಯ ಶ್ರೀರಾಮಮಂದಿರದಲ್ಲಿ ಆಯೋಜಿಸಲಾಗಿದೆ. ಎಸ್ಸೆಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಬ್ರಾಹ್ಮಣ ವಿದ್ಯಾರ್ಥಿಗಳು ಮೇಲ್ಕಂಡ ಕಚೇರಿಗೆ ಅರ್ಜಿ ಮತ್ತು ಅಂಕಪಟ್ಟಿಯನ್ನು ಜೂ.12ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಜಿ.ಜಯರಾಮ್ 9632732665, ರೂಪಶ್ರೀ 9036653823 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement