ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆದಿಮದಲ್ಲಿ 98ನೇ ಹುಣ್ಣಿಮೆ ಹಾಡು ಇಂದು

Rashmi Kasaragodu
Updated On : 13 Jun 2014, 2:19 am

ಕೋಲಾರ: ಆದಿಮ ಕುಟೀರದಲ್ಲಿ ಜೂ.13 ರ ಸಂಜೆ 7 ಗಂಟೆಗೆ ಹುಣ್ಣಿಮೆ ಹಾಡು 98 ರ ಪ್ರಯುಕ್ತ ಮಂಟೇಸ್ವಾಮಿ ಕಥಾ ಪ್ರಸಂಗ ಎಂಬ ನಾಟಕವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್.ಎಸ್. ಶಿವಪ್ರಕಾಶ್ ರಚಿಸಿ ಕೆ. ರಾಮಕೃಷ್ಣಯ್ಯ ನಿರ್ದೇಶಿಸಿ ವಿನ್ಯಾಸಗೊಳಿಸಿದ್ದು ಮೂಢನಂಬಿಕೆ ಜಾತೀಯತೆ, ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸುವ ಮಂಟೇಸ್ವಾಮಿ, ಸಿದ್ದಪ್ಪಾಜಿ ಪಾಂಚಾಳ ದೊರೆಗಳು ಮುಂತಾದ ಪಾತ್ರಗಳು ನಾಟಕದಲ್ಲಿ ಮೂಡಿಬರಲಿದೆ.  ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್, ಕೆಜಿಎಫ್ ವೃತ್ತ ಆರಕ್ಷಕ ನಿರೀಕ್ಷಕ ಲಕ್ಷ್ಮೀನಾರಾಯಣ್  ಭಾಗವಹಿಸಲಿದ್ದಾರೆ. ಈ ಬಾರಿಯ ಹುಣ್ಣಿಮೆ ಹಾಡನ್ನು ತುರಾಂಡಹಳ್ಳಿ ರವಿ ಮತ್ತು ಕುಟುಂಬದವರು ಟಿ.ಎಂ. ನಾರಾಯಣಗೌಡರ ಜ್ಞಾಪಕಾರ್ಥವಾಗಿ ಆಯೋಜಿಸಿಸಲಾಗಿದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement