ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗಣಿ ಕಾರ್ಮಿಕರ ಮನೆ ತೆರವು ಬೇಡ

Rashmi Kasaragodu
Updated On : 13 Jun 2014, 2:20 am

ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿ ಕಾಲೋನಿಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಮನೆಗಳನ್ನು ಖಾಲಿ ಮಾಡಲು ಅವಕಾಶ ನೀಡಬಾರದು ಎಂದು ನಗರಸಭೆಯಲ್ಲಿ ನಡೆದ ಸಾಮಾನ್ಯ ಸಬೆಯಲ್ಲಿ ತೀರ್ಮಾನಿಸಲಾಯಿತು.
ಚಿನ್ನದ ಗಣಿ ಪ್ರದೇಶದಲ್ಲಿ 2,812 ಮಂದಿಗೆ ಮಾತ್ರ ಮನೆ ನೀಡಬೇಕು ಎಂದು ಬಿಜಿಎಂಎಲ್ ಆಡಳಿತ ಮಂಡಳಿ ತೀರ್ಮಾನಿಸಿದ್ದು, ಉಳಿದ 10 ಸಾವಿರಕ್ಕೂ ಹೆಚ್ಚು ಮನೆಗಳನ್ನು ಖಾಲಿ ಮಾಡಿಸುವ ಆತಂಕದಲ್ಲಿ ಕಾರ್ಮಿಕರಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಖಾಲಿ ಮಾಡಿಸಲು ಬಿಡುವುದಿಲ್ಲ ಎಂದು ನಗರಸಭೆ ಅಧ್ಯಕ್ಷ ಎಂ. ಭಕ್ತವತ್ಸಲಂ ಮಂಡಿಸಿದ ನಿರ್ಣಯಕ್ಕೆ ಸಭೆಯಲ್ಲಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ಚಿನ್ನದ ಗಣಿ ಪ್ರದೇಶದಲ್ಲಿ ಓಪನ್‌ಕಾಸ್ಟ್ ಮೈನಿಂಗ್ ನಡೆಸುವುದಾಗಿ ಕೇಳಿ ಬರುತ್ತಿದ್ದು ಇದರಿಂದ ನಗರದಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತದೆ. ಅದಕ್ಕೆ ಅವಕಾಶ ನೀಡಬಾರದು ಎಂದು ಅವರು ತಿಳಿಸಿದರು. ನಗರಸಭೆ ಕಾರ್ಯಾಲಯದ ಮೇಲ್ಬಾಗದಲ್ಲಿ ರು. 50 ಲಕ್ಷ ವೆಚ್ಚದಲ್ಲಿ ಸಭಾಂಗಣ ನಿರ್ಮಾಣಕ್ಕೆ ಶಾಸಕಿ ವೈ. ರಾಮಕ್ಕ ಇದೇ ಸಂದರ್ಭದಲ್ಲಿ ಚಾಲನೆ ನೀಡಿ ನಂತರ ಸಾರ್ವಜನಿಕ ಶೌಚಾಲಯ ಉದ್ಘಾಟಿಸಿದರು.ಉಪಾಧ್ಯಕ್ಷ ದಾಸ್‌ಚಿನ್ನಸವರಿ, ಪೌರಾಯುಕ್ತ ವಿ. ಬಾಲಚಂದ್ರ, ವ್ಯವಸ್ಥಾಪಕ ನಂಜುಂಡಸ್ವಾಮಿ, ಆರೋಗ್ಯಾಧಿಕಾರಿ ಸರಸ್ವತಿ, ನಗರಸಭೆ ಸದಸ್ಯರಾದ ಲಾರೆನ್ಸ್, ದೀಪಾರಂಕ, ಕೆ.ಸಿ. ಮುರಳಿ, ಸ್ಟ್ಯಾನ್ಲೀ, ಮುರುಗೇಶನ್, ಉಮಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement