ಗ್ರಾಪಂಗಳಲ್ಲಿ ಅವ್ಯವಹಾರ: ರೈತ ಸಂಘ ಪ್ರತಿಭಟನೆ
ಗುಡಿಬಂಡೆ: ತಾಲೂಕಿನ ಗ್ರಾಪಂಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಘಟಕದ ತಾಲೂಕು ಅಧ್ಯಕ್ಷ ವೆಂಕಟರಮಣಪ್ಪ, ಸಂಘಟನೆ ಸದಸ್ಯರೊಂದಿಗೆ ಗ್ರಾಪಂಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕೊರೆಸಿದ್ದ ಹಲವು ಕೊಳವೆ ಬಾವಿಗಳು ಬತ್ತಿಹೋಗಿದ್ದು ಇವುಗಳಿಗೆ ಅಳವಡಿಸಿದ್ದ ಪಂಪು ಮತ್ತು ಮೋಟಾರುಗಳು ನಾಪತ್ತೆಯಾಗಿವೆ. ರಸ್ತೆ, ಚರಂಡಿ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ನಾರಾಯಣಸ್ವಾಮಿ, ಕೃಷ್ಣಪ್ಪ, ರಾಮರತ್ನಮ್ಮ,ನರಸಿಂಹಪ್ಪ, ಬೀಚಗಾನಹಳ್ಳಿ ಕೃಷ್ಣಪ್ಪ, ವೈ.ಎಂ. ನಾರಾಯಣ ಸ್ವಾಮಿ ಇದ್ದರು.