ಜುಲೈ 16,17ಕ್ಕೆ ತಾಲೂಕು ಸಾಹಿತ್ಯ ಸಮ್ಮೇಳನ
ಮುಳಬಾಗಲು: ಪಟ್ಟಣದ ನೂತನ ಡಿವಿಜಿ ರಂಗ ಮಂದಿರದಲ್ಲಿ ಜುಲೈ 16 ಮತ್ತು 17ರಂದು ನಡೆಸಲು ಗುರುವಾರ ಮಿನಿ ವಿಧಾನಸೌಧದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕು ಸಮ್ಮೇಳನವನ್ನು ಊರ ಹಬ್ಪದಂತೆ ಆಚರಿಸಲು ಎಲ್ಲಾ ಕನ್ನಡಿಗರು ಮುಂದಾಗಬೇಕು.ಇದಕ್ಕಾಗಿ ತಾವು ಸಂಪೂರ್ಣವಾದ ಸಹಕಾರ ನೀಡುವುದಾಗಿ ವಿವರಿಸಿದರು.
ತಹಶೀಲ್ದಾರ್ ಏಕೇಶಬಾಬು ಸಮ್ಮೇಳನದ ರೂಪುರೇಷೆಗಳನ್ನು ವಿವರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಮು.ಕೃ.ಪದ್ಮನಾಭರಾವ್ ಮಾತನಾಡಿ, ಸಮ್ಮೇಳನಾಧ್ಯಕ್ಷರನ್ನಾಗಿ ಸಾಹಿತಿ ಸಂಧ್ಯಾ ವಿ.ಕೆ.ರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಆರ್.ಎಸ್.ಕೃಷ್ಣಯ್ಯಶೆಟ್ಟಿ, ಶಂಕರ್ ಕೇಸರಿ, ವೆಂಕಟಪ್ಪ, ಇ.ಶ್ರೀನಿವಾಸಗೌಡ, ಪ್ರಕಾಶ್ ಮಂತಾದವರು ಭಾಗವಹಿಸಿದ್ದರು.