ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಲೂಕು ದೈಹಿಕ ಶಿಕ್ಷಕರ ಸಭೆ

Rashmi Kasaragodu
Updated On : 13 Jun 2014, 2:17 am

ಮುಳಬಾಗಲು: ವಿದ್ಯಾರ್ಥಿಗಳ ಶಿಸ್ತುಬದ್ಧ ಜೀವನ ನಡೆಸಿ, ದೇಶದ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲವನ್ನು ತರಬೇತಿಗೊಳಿಸುವಂತೆ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ ಹೇಳಿದರು. ತಾಲೂಕಿನ ನಂಗಲಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ತಾಲೂಕು ದೈಹಿಕ ಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದಿನ ಮಕ್ಕಳಿಗೆ  ಜ್ಞಾನ ತುಂಬುವ ಕೆಲಸ ಶಿಕ್ಷಕರ ಮೇಲಿದೆ ಎಂದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಚೌಡಪ್ಪ, ನಂಗಲಿ ಸಿಆರ್‌ಸಿ ಸುಬ್ರಮಣ್ಯಂ, ಮುಖ್ಯ ಶಿಕ್ಷಕ ನಾಗರಾಜ್, ದೈಹಿಕ ಶಿಕ್ಷಕರಾದ ಟಿ.ಆರ್.ಆನಂದ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ಕೃಷ್ಣೇಗೌಡ, ರಹೀಂ ಷರೀಫ್,ಶಿವರಾಜು ಮಾತನಾಡಿದರು.  ಸಮಾರಂಭದಲ್ಲಿ ದೈಹಿಕ ಶಿಕ್ಷಣ ಸಂಘದ ಪದಾಧಿಕಾರಿಗಳಾದ ಎಂ.ಸುಬ್ರಮಣ್ಯಂ, ಪಿ.ಎಂ.ನಾರಾಯಣಸ್ವಾಮಿ, ಎಸ್.ಶಂಕರಪ್ಪ, ಜಿ.ಎಸ್.ಶಂಕರಪ್ಪ,ಎಸ್.ಸುಧಾಮಣೆ,ಶಾಂತಮ್ಮ,ರಾಜೇಶ್ವರಿ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement