ಪ್ಯಾಸೆಂಜರ್ ರೈಲಿನಲ್ಲಿ ದರೋಡೆಗೆ ಪ್ರಯತ್ನ
ಬಂಗಾರಪೇಟೆ: ರೈಲಿನಲ್ಲಿ ಪ್ರಯಾಣಿಕರೊಬ್ಬರನ್ನು ದುಷ್ಕರ್ಮಿ ಬಂದೂಕು ತೋರಿಸಿ ಹಣ ನೀಡುವಂತೆ ಪೀಡಿಸಿ ಹಣ ನೀಡಲು ನಿರಾಕರಿಸಿದ ಕಾರಣ ಬಂದೂಕಿನಿಂದ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಕೋಲಾರ ತಾಲೂಕು ಅಲೇರಿ ಗ್ರಾಮದ ಭಾಸ್ಕರ್ ಎಂದು ಗುರುತಿಸಲಾಗಿದೆ. ಭಾಸ್ಕರ್ ಪ್ಯಾಸೆಂಜರ್ ರೈಲಿನಲ್ಲಿ ಕೋಲಾರಕ್ಕೆ ವಾಪಸ್ಸಾಗುತ್ತಿದ್ದರೆ. ಈ ವೇಳೆ, ರಾತ್ರಿ 8.30ರ ಸುಮಾರಿಗೆ 25 ವರ್ಷದ ಯುವಕನೊಬ್ಬ ಬಂದೂಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಇದು ಆಟದ ಬಂದೂಕು ಅಲ್ಲ.
ಇಲ್ಲಿ ನೋಡು ಬುಲೆಟ್ ಎಂದು ತೋರಿಸಿದ್ದಾನೆ. ಬಳಿಕ ಭಾಸ್ಕರ್ ತನ್ನ ಬಳಿ ಏನೂ ಇಲ್ಲ ಎಂದು ತಿಳಿಸಿದ್ದಾನೆ. ಆಗ ಯುವಕ ಅವರ ಮುಖಕ್ಕೆ ಹೊಡೆದು ಗಾಯಗೊಳಿಸಿದ್ದಾನೆ. ಅಷ್ಟೊತ್ತಿಗೆ ಕೋಲಾರ ನಿಲ್ದಾಣ ಬಂದಿದ್ದು, ಅವರಿಲ್ಲದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ಬಗ್ಗೆ ಪಟ್ಟಣದ ರೇಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.