ಬಾಲ ಕಾರ್ಮಿಕ ನಿರ್ಮೂಲನೆ ಅಗತ್ಯ
ಶಿಡ್ಲಘಟ್ಟ: ಸಮಾಜದಲ್ಲಿ ಜೀವಂತವಾಗಿರುವ ಬಾಲಕಾರ್ಮಿಕರ ಪದ್ಧತಿ ಹಾಗೂ ಬಾಲ್ಯವಿವಾಹ ಪಿಡುಗುಗಳನ್ನು ನಿರ್ಮೂಲನೆ ಮಾಡಬೇಕು ಎಂದು ನ್ಯಾ.ಎಸ್.ಮಹೇಶ್ ಹೇಳಿದರು.
ಪಟ್ಟಣದ ಆಜಾದ್ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಇಂಟಿಗ್ರೇಟೆಡ್ ರೇಲ್ವೆ ಫೌಂಡೇಷನ್ ಸಹಯೋಗದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಪಾಪಿರೆಡ್ಡಿ ಮಾತನಾಡಿದರು. ಸಂಪನ್ಮೂಲ ಭಾಷಣಕಾರ ವಕೀಲೆ ಕುಮಾರಿ ನೌತಾಜ್ರ ಅವರು ಬಾಲ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು. ಕುಮಾರಿ ಸೌಮ್ಯ ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕತನದಿಂದ ಉಂಟಾಗುವ ದುಷ್ಪರಿಣಾಮ ಬಗ್ಗೆ ತಿಳಿಸಿದರು. ಮುಬೀನಾ ಬೇಗಂ, ಕೃಷ್ಣಪ್ಪ ನಾಯಕ್, ಶ್ರೀನಿವಾಸ್, ಈ.ಡಿ.ಶ್ರೀನಿವಾಸ್, ಆರ್.ಐ.ಸುಬ್ರಹ್ಮಣಿ, ನೌಷದ್, ಅನೀಸ್, ಆದಮ್ ಪಾಷಾ ಸೇರಿ ಅನೇಕರಿದ್ದರು.