ಯೋಗನರಸಿಂಹ ರಥೋತ್ಸವ,ಶ್ರೀಪಾದರಾಜರ ಆರಾಧನೆ
ಮುಳಬಾಗಲು: ಪಟ್ಟಣದ ಹೊರವಲಯದ ನರಸಿಂಹತೀರ್ಥದಲ್ಲಿ ಗುರುವಾರ ಯೋಗನರಸಿಂಹ ದೇವರ ರಥೋತ್ಸವ ಹಾಗೂ ಶ್ರೀಪಾದರಾಜರ ಆರಾಧನೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರೀಪಾದರಾಜರ ಮಠದ ಕೇಶವತೀರ್ಥರು ರಥೋತ್ಸವಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ವಿಧ್ವತ್ ಸಭೆ, ಸ್ವರ್ಣವರ್ಣ ತೀರ್ಥ ವಿಧ್ವತ್ ಸಭೆ, ಸರ್ವ ಮೂಲ ಗ್ರಂಥ ಪಾರಾಯಣೆ ನಡೆಯಿತು. ಶ್ರೀಪಾದರಾಜರ ಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ, ವಿಶೇಷ ಪೂಜೆ ಮುಂತಾದ ಕಾರ್ಯಕ್ರಮಗಳು ನಡೆಯಿತು.