ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಾಹಿತ್ಯ ಸಮ್ಮೇಳನ ಇಂದು

Rashmi Kasaragodu
Updated On : 13 Jun 2014, 2:20 am

ಕೆಜಿಎಫ್: ಬೇತಮಂಗಲ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಗ್ರಾಮೀಣ ಪ್ರೌಢಶಾಲೆಯಲ್ಲಿ ಜೂ.13 ರಂದು ಹಮ್ಮಿಕೊಳ್ಳಲಾಗಿದೆ.  ಬೇತಮಂಗಲ ಗ್ರಾಮದ ಮುಖದ್ವಾರಗಳಿಗೆ ಕನ್ನಡದ ತೋರಣಗಳು, ಬೆಂಟಿಕ್ಸ್, ವಿದ್ಯುತ್ ದೀಪಾಲಂಕಾರ ಸೇರಿದಂತೆ ಅಲಂಕೃತ ವೇದಿಕೆ ಸಿದ್ದಪಡಿಸಲಾಗಿದೆ.
ಕಾರ್ಯಕ್ರಮ: ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳೊಂದಿಗೆ, ಡೊಳ್ಳು ಕುಣಿತ, ಕೀಲು ಕುದುರೆ ಸಮಕಾಲಿನ ವಿಷಯಗಳ ಬಗ್ಗೆ ನಾಡಿನ ಚಿಂತಕರಿಂದ ಕವಿ ಗೋಷ್ಠಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಗಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ, ಕನ್ನಡ ಪುಸ್ತಕಗಳ ಮಲಿಗೆಗಳ ಆಯೋಜನೆ ಇನ್ನಿತರ ಸಾಹಿತ್ಯ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಸಾಹಿತ್ಯ ಸಮ್ಮೇಳನವನ್ನು ಕೆಜಿಎಫ್ ವಿಧಾನ ಸಭಾ ಕ್ಷೇತ್ರದ ಶಾಸಕಿ ವೈ.ರಾಮಕ್ಕ ಉದ್ಘಾಟಿಸಲಿದ್ದು, ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, ತಹಸೀಲ್ದಾರ್ ಉಷಾ ಅವರಿಂದ ರಾಷ್ಟ್ರಧ್ವಜ, ಪರಿಷತ್ತು ಧ್ವಜ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆರ್.ಅಶ್ವತ್ ನೆರವೇರಿಸುವರು.
ಪುಸ್ತಕ ಬಿಡುಗಡೆ: ಉದ್ಘಾಟಣೆ ಸಂದರ್ಭದಲ್ಲಿ ಕೋಗಿಲಹಳ್ಳಿ ಕೃಷ್ಣಪ್ಪ ಅವರು ಕವಿಗಳ ಕೈಪಿಡಿ, ಕ.ಟ.ಕೃಷ್ಣಪ್ಪ, ನ್ನನ್ನೂರು ನನ್ನ ಜನ ಕುನುಡಿ(ಚುಟುಕು) ಮಂಜುಕನ್ನಿಕಾ ಸುಂದರಬನನ, ದಿ ಇಂಡಿಯನ್ ಗರ್ಲ್ಸ್, ಮುತ್ತೆ ನೀ ಜಾರದಿರು ಕಾನೂನು ಲೇಖನಗಳು ಬಿಡುಗಡೆ ಮಾಡಲಾಗುವುದು.
ನಕಲಿ ಜಾತಿ ಪತ್ರ ಪ್ರಕರಣ: ಪ್ರಭಾರಿ ಪ್ರಾಂಶುಪಾಲೆ ವಜಾ
ಕೋಲಾರ: ಕೆಲಸ ಗಿಟ್ಟಿಸಿಕೊಳ್ಳಲು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಿರುವ ಆರೋಪದ ಮೇರೆಗೆ ಕೆಜಿಎಫ್ ಸುಭಾಷಿಣಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು ತನ್ನ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಎಸ್.ಜಾನಕಿ ಅವರನ್ನು ಸೇವೆಯಿಂದ ವಜಾಗೊಳಿಸಿದೆ.
ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಹಾಗೂ ತಮಿಳು ಭಾಷಾ ಉಪನ್ಯಾಸಕಿಯಾಗಿರುವ ಜಾನಕಿ ಮೂಲತಃ  ದೇವಾಂಗ  ಜನಾಂಗಕ್ಕೆ ಸೇರಿದವರಾಗಿದ್ದು, ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಅಕ್ರಮವಾಗಿ ಸರ್ಕಾರಿ ಅನುದಾನಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿರುವುದಾಗಿ ದೂರು ಬಂದ ಮೇರೆಗೆ ಇವರ ವಿರುದ್ಧ ಜಾತಿ ವಿಚಾರಣೆಯನ್ನು ಕೋಲಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕದಲ್ಲಿ ಕೈಗೊಂಡಿತ್ತು.
 ಜಾತಿ ವಿಚಾರಣಾ ಕಾಲದಲ್ಲಿ ಇವರು ಮೂಲತಃ ದೇವಾಂಗ ಜನಾಂಗಕ್ಕೆ ಸೇರಿದ್ದು, ಅಕ್ರಮವಾಗಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ನೌಕರಿಗೆ ಸೇರಿರುವುದು ಕಂಡುಬಂದ ಹಿನ್ನೆಲೆಯಲ್ಲಿ  ಕೋಲಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಘಟಕದ ಪೊಲೀಸ್ ಅಧಿಕಾರಿಗಳು ಆರ್. ಜಾನಕಿರವರ ವಿರುದ್ಧ ಮೋಸ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆಯನ್ವಯ ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಜೂ.10ರಂದು ಸುಭಾಷಿಣಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯವರು ಆರ್.ಜಾನಕಿರವರನ್ನು ಸೇವೆಯಿಂದ ವಜಾ ಮಾಡಿ, ಸರ್ಕಾರದಿಂದ ಪಡೆದುಕೊಂಡಿದ್ದ ಹಣಕಾಸಿನ ಸವಲತ್ತುಗಳನ್ನು ಹಿಂಪಡೆಯಲು ಶಿಕ್ಷಣ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement