ಇಬ್ಬರು ಮಹಿಳೆಯರು ಸೇರಿ ನಾಲ್ವರ ಮೇಲೆ ಹಲ್ಲೆ
ಶಿಡ್ಲಘಟ್ಟ: ಮನೆಯ ಮುಂದಿನ ಖಾಲಿ ಜಾಗದಲ್ಲಿ ಹಾದು ಹೋಗದಂತೆ ತಡೆದಿದ್ದಕ್ಕಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ಕು ಮಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ತಾಲೂಕಿನ ವೈ.ಹುಣಸೇನಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಗೊಲ್ಲಹಳ್ಳಿ ಗ್ರಾಮದಲ್ಲಿ ಆನಂದಮ್ಮ ಎಂಬ ಮಹಿಳೆ ತನ್ನ ಮನೆಯ ಮುಂದೆ ಟ್ಯಾಕ್ಟರ್ನಲ್ಲಿ ಇಟ್ಟಿಗೆಯನ್ನು ಸಾಗಿಸುತ್ತಿದ್ದ ತನ್ನ ಗಂಡನ ದಾಯಾದಿಗಳನ್ನು ಮನೆಯ ಮುಂದೆ ಟ್ರಾಕ್ಟರ್ ತರಬಾರದೆಂದು ತಡೆದಿದ್ದಾರೆ. ಇದರಿಂದ ಕುಪಿತಗೊಂಡ ದಾಯಾದಿ ಕೃಷ್ಣಪ್ಪ ಮತ್ತು ತನ್ನ ಸಹಚರರು ಏಕಾಏಕಿ ರಾಡ್ ಮತ್ತು ಮಚ್ಚನ್ನು ಹಿಡಿದುಕೊಂಡು ಆನಂದಮ್ಮಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಬಂದಿದ್ದ ಆನಂದಮ್ಮನ ಮೈದುನ ಹಾಗೂ ಆತನ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಘಟನೆಯ ನಂತರ ವಿಚಾರಿಸಲು ಹೋದ ಆನಂದಮ್ಮನ ಗಂಡನ ಮೇಲೂ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.