'ಎದ್ದೇಳು ಗ್ರಾಹಕ ಎದ್ದೇಳು' ಗ್ರಾಹಕ ಕೈಪಿಡಿ ಬಿಡುಗಡೆ
ಗೌರಿಬಿದನೂರು: ಬಳಕೆದಾರರ ಆಸಹಾಯಕತೆಯನ್ನು ರಕ್ಷಿಸುವ ಸಲುವಾಗಿ ಹಲವಾರು ಕಾನೂನುಗಳನ್ನು ಸರ್ಕಾರ ರಚಿಸಿದೆ. ಈ ದಿಸೆಯಲ್ಲಿ ಗ್ರಾಹಕರು ನಿರಂತರವಾಗಿ ಶೋಷಣೆಗೆ ಗುರಿಯಾಗುತ್ತಿದ್ದಾನೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೇಶವರೆಡ್ಡಿ ಅಭಿಪ್ರಾಯಪಟ್ಟರು. ಕೆಡಿಪಿ ಸಭೆಯಲ್ಲಿ “G¥æ§Þ×Úß ಗ್ರಾಹಕ G¥æ§Þ×Úß’ ಗ್ರಾಹಕ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಬಳಕೆದಾರ ತಾವು ಖರೀದಿಸುವ ವಸ್ತುಗಳಿಂದ ತೊಂದರೆ ಉಂಟಾದಲ್ಲಿ ಅದಕ್ಕೆ ಸೂಕ್ತ ಪರಿಹಾರ ಪಡೆಯುವುದು ಗ್ರಾಹಕರ ಹಕ್ಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಮಾತನಾಡಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷರಿದ್ದರು. ಉಪಸ್ಥಿತರಿದ್ದರು. ರಾಘವೇಂದ್ರ ಟ್ರಸ್ಟ್ ಫಾರ್ ಎಜ್ಯುಕೇಷನ್ ಆ್ಯಂಡ್ ಎನ್ವಿರಾನ್ಮೆಂಟಲ್ ಆ್ಯಕ್ಷನ್ ಫಾರ್ ನೀಡ್ಸ್ ಸರ್ಕಾರೇತರ ಸಂಸ್ಥೆಯ ಗ್ರಾಹಕರಿಗೆ ಉಚಿತವಾಗಿ ಈ ಕೈಪಿಡಿಯನ್ನು ಸಿದ್ಧಪಡಿಸಿದೆ. ಕಾರ್ಯದರ್ಶಿ ಬಿ.ವಿ.ಅಶ್ವತ್ಥನಾರಾಯಣಶೆಟ್ಟಿ, ಕೆ.ವಿ.ಬಾಲಕೃಷ್ಣ, ಕಾಮ್ಗನಹಳ್ಳಿ ಮತ್ತು ಸಂಕಲ್ಪ ಪ್ರಿಂಟರ್ಸ್ನ ಮಾಲೀಕರಾದ ವೀರಣ್ಣನವರು ಭಾಗವಹಿಸಿದ್ದರು.