ಕಲಿಕೆ ಜತೆ ಮಕ್ಕಳ ಬೇಕು ಬೇಡಗಳನ್ನು ಗಮನಿಸಿ
ಕೆಜಿಎಫ್: ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಲು ವಿದ್ಯಾಭ್ಯಾಸದ ಜತೆಗೆ ಅವರ ಬೇಕು ಬೇಡಗಳ ಬಗ್ಗೆ ಪೊಷಕರು ಅರಿತು ಪ್ರೋತ್ಸಾಗ ನೀಡಬೇಕು ಎಂದು ತ್ವರಿತ ವಿಲೇವಾರಿ ನ್ಯಾಯಾಧೀಶ ಸುಬ್ರಮಣ್ಯ ಹೇಳಿದರು.
ಬಾಲ ಕಾರ್ಮಿಕರ ನಿರ್ಮೂಲನಾ ದಿನಾಚರಣೆ ಅಂಗವಾಗಿ ಆಂಡ್ರಸನ್ಪೇಟೆಯ ನೂರಿ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ನಗುವ ಕನ್ನಡಿಯಂತೆ ನೋಡಿಕೊಳ್ಳಬೇಕು. ಅವರ ಬಾಲ್ಯದ ಹಕ್ಕುಗಳನ್ನು ಪಡೆಯಲು ಅಗತ್ಯ ಕ್ರಮಕ್ಕೆ ಮುಂದಾಗಬೇಕು. ದೇಶವನ್ನು ಬಾಲ ಕಾರ್ಮಿಕರಿಂದ ಮುಕ್ತಗೊಳಿಸಬೇಕು ಎಂದರು.
ಮಕ್ಕಳ ಮತ್ತು ಮಹಿಳಾ ಸಂಘದ ಮುಖ್ಯಸ್ಥೆ ಹಾಗೂ ವಕೀಲೆ ಕಲೈಸೆಲ್ವಿ ಅವರು, ಮಕ್ಕಳನ್ನು ಉತ್ತಮವಾಗಿ ಬೆಳೆಸಿ ಅವರಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವ ಅವಶ್ಯಕತೆ ಇದೆ. ಕೋಲಾರ ಜಿಲ್ಲೆಯಲ್ಲಿ 620 ಬಾಲಾಪರಾಧ ಪ್ರಕರಣಗಳು ಪತ್ತೆ ಆಗಿದ್ದು ರಾಜ್ಯದಲ್ಲಿ 2 ಲಕ್ಷ ಬಾಲ ಕಾರ್ಮಿಕರು ಇದ್ದಾರೆ ಎಂಬುದು ಆತಂಕಕಾರಿ ಎಂದರು.