ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಿವಯೋಗಿಸ್ವಾವು ಗೆಲ್ಲಿಸಲು ನಾರಾಯಣಸ್ವಾಮಿ ಮನವಿ

Rashmi Kasaragodu
Updated On : 15 Jun 2014, 1:37 am

ಬಂಗಾರಪೇಟೆ: ನಡೆಯಲಿರುವ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಾಲಿ ಸದಸ್ಯ ಡಾ.ಶಿವಯೋಗಿಸ್ವಾವು ಪರವಾಗಿ ಮತ್ತೊಬ್ಬ ಎಂಎಲ್ಸಿ ವೈ.ಎ. ನಾರಾಯಣಸ್ವಾಮಿ ಪಟ್ಟಣದಲ್ಲಿ ಬಿರುಸಿನ ಪ್ರಚಾರ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಮರು ಆಯ್ಕೆ ಮಾಡುವಂತೆ ಪದವೀಧರ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ವಿವಿಧ ವಿದ್ಯಾಸಂಸ್ಥೆಗಳಿಗೆ ತೆರಳಿ ಮತಯಾಚನೆ ಮಾಡಿದ ಬಳಿಕ ಪ್ರವಾಸಿ ಮಂದಿರದಲ್ಲಿ ಶಿಕ್ಷಕ ಮುಖಂಡರ ಜೊತೆ ಸಭೆ ನಡೆಸಿ ಈ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು ಅಭ್ಯರ್ಥಿ ಶಿವಯೋಗಿಸ್ವಾವು ಗೆಲವು ಅನಿವಾರ್ಯವಾಗಿದೆ. ವಿಧಾನಪರಿಷತ್ ಹಿರಿಯರು ಹಾಗೂ ಸಭ್ಯಸ್ಥರು ಇರುವ ಮನೆ ಅಲ್ಲಿಗೆ ಉತ್ತಮ ಗುಣಗಳನ್ನು ಹೊಂದಿರುವವರನ್ನು ಆಯ್ಕೆ ಮಾಡಿ ಕಳುಹಿಸುವುದು ಎಲ್ಲರ ಕರ್ತವ್ಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಮುಖ ನೋಡಿ ಬುದ್ದಿವಂತರು ಹೆಚ್ಚಿನ ಮತ ನೀಡಿದರಿಂದ ಲೋಕಸಭೆ ಬಿಜೆಪಿ ಪಾಲಾಗಿದೆ. ಇಲ್ಲಿಯೂ ಬುದ್ದಿವಂತರೇ ಮತದಾರರಾಗಿರುವುದರಿಂದ ಬಿಜೆಪಿಗೆ ಮತ ಹಾಕಬೇಕೆಂದು ಕೋರಿದರು.



 ಸಾವಯವ ಕೃಷಿ ಬಗ್ಗೆ ಜಾಗೃತಿ ಕಾರ್ಯಕ್ರಮ


ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿ ಮುದುಗೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಗೌರಿಬಿದನೂರು ಮತ್ತು ಔಟ್ ರೀಚ್ ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಸಾವಯವ ಭಾಗ್ಯ ಯೋಜನೆಯಡಿ ರೈತರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಹೊಸೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದ ಟಿ.ವಿ.ಹರಿನಾಥ್, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಆಗುವ ದುಷ್ಟಪರಿಣಾಮ ತಪ್ಪಿಸಲು ಸಾವಯವ ಕೃಷಿಗೆ ಬದಲಾಗುವುದು ಅಗತ್ಯ ಎಂದು ತಿಳಿಸಿದರು. ಕ್ಷೇತ್ರಾಧಿಕಾರಿಗಳಾದ ವಿ.ಎ.ಜಗದೀಶ್ ಅವರು, ಸಾವಯವ ಕೃಷಿಯಲ್ಲಿ ಬಳಸುವ ವಿವಿಧ ರೀತಿಯ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು. ಕುಮದ್ವತಿ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಶ್ರೀ ಬೈಲಪ್ಪ ಮಾತನಾಡಿದರು. ನಂಜಪ್ಪ, ಚಂದ್ರರೆಡ್ಡಿ, ಶಶಿಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement