ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಕಾಲದಲ್ಲಿ ಕಾಮಗಾರಿ ಮುಗಿಸಿ: ಶಾಸಕ ಸುಧಾಕರ್

Rashmi Kasaragodu
Updated On : 15 Jun 2014, 1:37 am

ಚಿಕ್ಕಬಳ್ಳಾಪುರ: ಒಂದು ಕಾಮಗಾರಿಯನ್ನು ಸಕಾಲದಲ್ಲಿ ಮುಗಿಸದೇ ಮತ್ತೊಂದು ಕಾಮಗಾರಿ ಆರಂಭಿಸಿ ಜನರಿಗೆ ಕಿರಿಕಿರಿ ಮಾಡಬಾರದು ಎಂದು ಶಾಸಕ ಡಾ.ಕೆ.ಸುಧಾಕರ್ ಸೂಚಿಸಿದರು. ನಗರದಲ್ಲಿರುವ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ನಿರ್ಮಾಣದಲ್ಲಿ ಗುಣಮಟ್ಟವನ್ನು ಕಾಪಾಡುವುದು ಮುಖ್ಯ. ಕಳಪೆ ಕಾಮಗಾರಿಗಳಿಂದ ಅನುದಾನ ಕೇವಲ ವ್ಯರ್ಥವಾಗುವುದಲ್ಲದೇ ಸಾರ್ವಜನಿಕರು ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಒಂದು ರಸ್ತೆಯಲ್ಲಿ ಮೋರಿ ಅಗೆದು ಹಾಗೆಯೇ ಬಿಡುವುದು. ಮತ್ತೆ ಹೊಸ ರಸ್ತೆಯಲ್ಲಿ ಮೋರಿ ಅಗೆಯುವುದನ್ನು ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಾಗ ಕೊಳವೆಬಾವಿಯನ್ನು ಕೊರೆಸಬೇಕು. ನೀರು ಸಿಕ್ಕಿದ ತಕ್ಷಣ ಪಂಪ್ ಮೋಟಾರ್ ಅಳವಡಿಸಿ ಮತ್ತು ವಿದ್ಯುತ್ ಸಂಪರ್ಕ ಒದಗಿಸಿ ನೀರನ್ನು ಸರಬರಾಜು ಮಾಡಬೇಕು. ಒಂದು ವೇಳೆ ಕೊಳವೆಬಾವಿ ವಿಫಲವಾದಾಗ ಟ್ಯಾಂಕರುಗಳ ಮೂಲಕವಾದರೂ ಸಹ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಈ ವಿಚಾರದಲ್ಲಿ ಪಂಚಾಯತ್ ರಾಜ್, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ದೂರುಗಳು ಬಾರದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು. ತಾಲೂಕು ವ್ಯಾಪ್ತಿಯಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸಿದರೆ ಸರ್ಕಾರದ ಗಮನ ಸೆಳೆದು ಅನುದಾನವನ್ನು ಕೊಡಿಸಿಕೊಡುವುದಾಗಿ ತಿಳಿಸಿದರು. ತಾಲೂಕಿನಲ್ಲಿ ಶಿಕ್ಷಕರ ಕೊರತೆ, ಇತ್ತೀಚೆಗೆ ಆಲಿಕಲ್ಲು ಮಳೆ ಸುರಿದ ಬೆಳೆ ನಷ್ಟ ಸಂಭವಿಸಿದ್ದು, ನಾಯಿಗಳ ಕಡಿತ ಪ್ರಕರಣ ಹೆಚ್ಚಳ ಸೇರಿದಂತೆ ಮುಂತಾದ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ತಾಪಂ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಕಾರ್ಯನಿರ್ವಹಣಾಧಿಕಾರಿ ಗಿರಿಜಾ ಶಂಕರ್, ತಹಸೀಲ್ದಾರ್ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.

ಟೇಕಲ್‌ನಲ್ಲಿ ಕೆಂಪೇಗೌಡರ ಅದ್ಧೂರಿ ಜಯಂತಿ
ಟೇಕಲ್: ಟೇಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ 504 ನೇ ಜಯಂತ್ಯುತ್ಸವದ ಅಂಗವಾಗಿ ಗೋಪಸಂದ್ರದ ಯುವಕ ಸಂಘದ ವತಿಯಿಂದ ಕೆಂಪೇಗೌಡರ ಪ್ರತಿಮೆಯ ಪಲ್ಲಕ್ಕಿ ಉತ್ಸವವನ್ನು ಕೋಲಾರ ಜಿಲ್ಲಾ ಕೇಂದ್ರಕ್ಕೆ ಕರೆದೊಯ್ಯಲು ಮಾಲೂರು ತಾಲೂಕು ಹಾಲು ಒಕ್ಕೂಟದ ನಿರ್ದೇಶಕ ಕೆ.ವೈ.ನಂಜೇಗೌಡರು ಚಾಲನೆ ನೀಡಿದರು. ಈ ವೇಳೆ ಕೆಂಪೇಗೌಡರ ಪಲ್ಲಕ್ಕಿ ಉತ್ಸವದ ಜೊತೆ ರಾಷ್ಟ್ರಕವಿ ಕುವೆಂಪು ಹಾಗೂ ದಿವಂಗತ ಹಿರಿಯ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರಗಳಿದ್ದ ಪಲ್ಲಕ್ಕಿಗಳನ್ನು ಗೋಪಸಂದ್ರ ಗ್ರಾಮದಿಂದ ಟೇಕಲ್‌ನ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತದನಂತರ ಕೆಂಪೇಗೌಡರಿಗೆ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಲಾಯಿತು.  ಈ ವೇಳೆ ಗೋವಿಂದರಾಜರೆಡ್ಡಿ, ಮುಖಂಡ ಎಸ್.ಜಿ.ರಾಮಮೂರ್ತಿ, ಮಂಜುನಾಥಗೌಡ, ವೆಂಕಟಪ್ಪ, ನಾರಾಯಣಸ್ವಾಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement