ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅನ್ನಭಾಗ್ಯ ಅಕ್ಕಿ ನಾಪತ್ತೆ ಪ್ರಕರಣ ಗಿರಣಿಗಳ ಮೇಲೆ ದಿಢೀರ್ ದಾಳಿ

Mainashree
Updated On : 18 Jun 2014, 11:46 am

ಕೋಲಾರ/ಬಂಗಾರಪೇಟೆ: ಜಿಲ್ಲೆಯ ಬಂಗಾರಪೇಟೆಯಲ್ಲಿ ನಿಯಮ ಗಾಳಿಗೆ ತೂರಿರುವ ಎರಡು ಅಕ್ಕಿ ಗಿರಣಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗಿದೆಂದು ಆಹಾರ ಇಲಾಖೆಯ ಆಯುಕ್ತ ಹರ್ಷಗುಪ್ತ ತಿಳಿಸಿದರು.
ಅಕ್ಕಿ ಗಿರಣಿಗಳಲ್ಲಿ ಅಕ್ರಮಗಳು ನಡೆಯುತ್ತಿದೆ, ಪಡಿತರರಿಗೆ ವಿತರಣೆ ಮಾಡುವ ಅಕ್ಕಿಯನ್ನು ಶೇಖರಿಸಿಡಲಾಗಿದೆ, ಸಗಟು ವ್ಯಾಪಾರ ಮಾಡುತ್ತಿರುವ ಅಕ್ಕಿ ಗಿರಣಿಗಳ ಮಾಲೀಕರು ಆಹಾರ ಪದಾರ್ಥಗಳ ಲೆಕ್ಕವನ್ನು ಸರಿಯಾಗಿಟ್ಟಲ್ಲವೆಂಬ ದೂರಿನ ಮೇರೆಗೆ ತಾವಿಂದು ಬಂಗಾರಪೇಟೆಗೆ ಭೇಟಿ ನೀಡಿ ಪಿ.ಆರ್.ಎಸ್ ಮತ್ತು ವಿಜಯಲಕ್ಷ್ಮೀ ಅಕ್ಕಿ ಗಿರಣಿಗಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಲೋಪಗಳು ಕಂಡು ಬಂದಿರುವುದರಿಂದ ಕ್ರಮಕ್ಕೆ ಆದೇಶಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಅಕ್ಕಿ ಗಿರಣಿಗಳಲ್ಲಿ ಸಗಟು ವ್ಯಾಪಾರ ಮಾಡಲು ಅವಕಾಶವಿಲ್ಲ, ಒಂದು ವೇಳೆ ಸಗಟು ವ್ಯಾಪಾರ ಮಾಡಿದರೂ ಪ್ರತಿನಿತ್ಯದ ದಾಸ್ತಾನು, ಮಾರಾಟದ ವಿವರವನ್ನು ಪ್ರಕಟಿಸಬೇಕು.ಆದರೆ, ಮಾಲೀಕರು ನಿಯಮಗಳನ್ನು ಪಾಲಿಸಿಲ್ಲ, ಜತೆಗೆ ಅಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದಾಗ ಪಡಿತರರಿಗೆ ವಿತರಣೆ ಮಾಡುವ ಅಕ್ಕಿಯಂತೆ ಅನುಮಾನ ಬಂದಿದ್ದು ನಿಯಮ ಪಾಲಿಸದ ಕಾರಣ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.
ಬಯೋವುಟ್ರಿಕ್: ಬಯೋವುಟ್ರಿಕ್ ಪಡಿತರ ವ್ಯವಸ್ಥೆ ರಾಜ್ಯದ ಗುಲ್ಬರ್ಗ, ತುಮಕೂರು, ಚಿಕ್ಕಮಗಳೂರು, ಮೈಸೂರು, ಧಾರವಾಡ ಹಾಗೂ ಬೆಳಗಾಂ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದ್ದು ಉಳಿದ ಕಡೆ ಶೀಘ್ರವೇ ಅನುಷ್ಠಾನಕ್ಕೆ ತರಲಾಗುತ್ತದೆ, ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಬಯೋ ಮೆಟ್ರಿಕ್ ವ್ಯವಸ್ಥೆ ಅನುಷ್ಠಾನ ವಿಳಂಬವಾಗಿದೆ ಎಂದು ತಿಳಿಸಿದರು.
ಮಿಲ್‌ಗೆ ಬೀಗ ಜಡಿದು ಮಾಲೀಕ ಪರಾರಿ!
ಪಟ್ಟಣದಲ್ಲಿರುವ ಪಿಆರ್‌ಎಸ್, ಚೆನ್ನಮಾಳ್, ವಸೀವುಲ್ಲಾ ಮಾಡ್ರನ್ ಮಿಲ್ ಹಾಗೂ ವಿಜಯಲಕ್ಷ್ಮಿ ಅಕ್ಕಿ ಗಿರಣಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ದಾಳಿ ವಿಷಯ ತಿಳಿದು ಚೆನ್ನಮಾಳ್ ಮಿಲ್‌ಗೆ ಬೀಗ ಜಡಿದು ಮಾಲೀಕರು ಪರಾರಿಯಾಗಿದ್ದರು. ಆದರೆ ಆಯುಕ್ತರು ಬೀಗ ಒಡೆದು ದಾಸ್ತಾನು ಪರಿಶೀಲಿಸಿದರು. ಅಲ್ಲಿ ಎಫ್‌ಸಿಐ ಗೋದಾಮಿನ ಚೀಲಗಳು ಪತ್ತೆಯಾದವು. ಪಿಆರ್‌ಎಸ್ ಮಿಲ್‌ನಲ್ಲಿ ಕಡಿಮೆ ದರದ ಅಕ್ಕಿಯನ್ನು ಹೆಚ್ಚಿನ ಬೆಲೆಯ ಚೀಲದಲ್ಲಿ ತುಂಬಿಸಿದ್ದು ಕಂಡುಬಂತು. ಈ ಬಗ್ಗೆ ತನಿಖೆ ಮಾಡಲು ಅಕ್ಕಿ ಸ್ಯಾಂಪಲ್ ಸಂಗ್ರಹಿಸಿದರು. 1740 ಕ್ವಿಂಟಾಲ್ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಉತ್ತರ ನೀಡಲು ವಿಫಲರಾದ ಆಹಾರ ಶಿರಸ್ತೆದಾರ್ ವೆಂಕಟಾಚಲಯ್ಯ ಅವರನ್ನು ಜಿಲ್ಲಾಧಿಕಾರಿ ಡಿ.ಕೆ. ರವಿ ತೀವ್ರ ತರಾಟೆಗೆ ತೆಗೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement