ಡಾ. ಮಂಜುನಾಥ್‌ಗೆ ಯುವ ವಿಜ್ಞಾನ ಪ್ರಶಸ್ತಿ
ಕೋಲಾರ: ನಗರದ ಮಹಿಳಾ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಹೆಚ್.ಸಿ. ಮಂಜುನಾಥ ಅವರಿಗೆ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೀಡುವ ಸಂಶೋಧನಾ ಯುವ ವಿಜ್ಞಾನ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಕೋಲಾರ ತಾಲೂಕಿನ ಹೊಳಲಿ ಗ್ರಾಮದ ಮಂಜುನಾಥ ಅವರು ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಸಹ ಪಡೆದಿದ್ದಾರೆ. ಅಲ್ಲದೆ ಈಗಾಗಲೇ ಭಾರತ ಸರ್ಕಾರದ ಇಂಡಿಯನ್ ಸೊಸೈಟಿ ಆಫ್ ರೇಡಿಯೇಷನ್ ಫಿಸಿಕ್ಸ್‌ನ ನ್ಯೂಕ್ಲಿಯಾನಿಕ್ಸ್ ಅವಾರ್ಡ್- 2013 ದೊರೆತಿದ್ದು, ವೈದ್ಯಕೀಯ ಭೌತವಿಜ್ಞಾನದಲ್ಲಿ ಅವರ ಸಾಧನೆ ಪರಿಗಣಿಸಿ ಈ ಗೌರವ ನೀಡಲಾಗಿದೆ.
ಪ್ರಶಸ್ತಿ ಪುರಸ್ಕೃತ ಮಂಜುನಾಥ್ ಅವರನ್ನು ಮಹಿಳಾ ಕಾಲೇಜಿನ ಪ್ರಾಂಶುಪಾಲ ಆಂಜಿನಪ್ಪ ಅಭಿನಂದಿಸಿದ್ದಾರೆ.