ಬೋಗಸ್ ಮತದಾರರ ವಿರುದ್ಧ ಕ್ರಮಕ್ಕೆ ಆಗ್ರಹ
ಕ.ಪ್ರ. ವಾರ್ತೆ ್ಣ ಕೋಲಾರ ್ಣ ಜೂ. 18
ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಿರುವ ಡಾ.ಎ.ಹೆಚ್. ಶಿವಯೋಗಿಸ್ವಾವುಯವರ ಪರವಾಗಿ ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡರು ಮತಯಾಚನೆ ಮಾಡಿರುವುದಕ್ಕೆ ಹರಿಹರದ ಜೆಡಿಎಸ್ ಶಾಸಕ ಶಿವಶಂಕರ್ ಟೀಕಿಸಿರುವುದಕ್ಕೆ ಬಿಜೆಪಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಸದಾನಂದಗೌಡರು ಚುನಾವಣಾ ಪ್ರಚಾರಕ್ಕೆ ಕೇಂದ್ರ ಸಚಿವರಾಗಿ ಬಂದಿರಲಿಲ್ಲ. ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಬಂದಿದ್ದರು. ಇದು ನಮ್ಮ ಪಕ್ಷದ ನೀತಿ-ನಿಯಮ, ಸಿದ್ಧಾಂತ ಹಾಗೂ ಬದ್ಧತೆಯೂ ಹೌದು ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ಸಮರ್ಥಿಕೊಂಡರು.
ಪ್ರವಾಸಕ್ಕೆ ಹೋದವರಿಗೆ ಪಾಠ ಮಾಡಿ: ಚುನಾವಣೆಗಳಿಗೆ ಸ್ಪರ್ಧಿಸುವ ಪಕ್ಷದ ಕಾರ್ಯಕರ್ತರ ಪರವಾಗಿ ಪ್ರಚಾರ ಮಾಡಬಾರದು ಎಂಬ ಕಾನೂನು ಏನಾದರೂ ಉಂಟೇ ಎಂದು ಪ್ರಶ್ನಿಸಿದ ಅವರು, ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಜೆಡಿಎಸ್ ನಾಯಕರು ಮತ್ತು ಶಾಸಕರಿಗೆ ಮೊದಲು ಹರಿಹರ ಶಾಸಕ ಶಿವಶಂಕರ್ ಪಾಠ ಹೇಳಲಿ ಎಂದು ಸೂಚ್ಯವಾಗಿ ನುಡಿದರು.
ಬಿಜೆಪಿ ಸಾಧನೆ: ಬಿಜೆಪಿ ಸರ್ಕಾರವಿದ್ದಾಗ ಶಿಕ್ಷಣ ಇಲಾಖೆಗೆ 18 ಸಾವಿರ ಕೋಟಿ ರು.ಗಳನ್ನು ಬಜೆಟ್ನಲ್ಲಿ ಮೀಸಲಿಟ್ಟು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದನ್ನು ಜೆಡಿಎಸ್ ಮುಖಂಡರು ನೆನಪು ಮಾಡಿಕೊಳ್ಳಲಿ ಎಂದರು.
ರಾಜ್ಯದಲ್ಲಿ ಸುಮಾರು 5 ಸಾವಿರ ಪದವೀಧರರಿಗೆ ಕಾಲೇಜು ಉಪನ್ಯಾಸಕರಾಗಿ ಕೆಲಸ ಮಾಡಲು ಬಿಜೆಪಿ ಸರ್ಕಾರವಿದ್ದಾಗ ಅವಕಾಶ ಮಾಡಿಕೊಟ್ಟಿದೆ. ಜೆಒಸಿಯ 3 ಸಾವಿರ ಶಿಕ್ಷಕರ ನೇಮಕಾತಿ ಖಾಯಂ, 1987ಕ್ಕೆ ನಿಂತಿದ್ದ ಅನುದಾನ ರಹಿತ ಶಾಲೆಗಳಿಗೆ ಅನುದಾನ ಭಾಗ್ಯ ಕಲ್ಪಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಉದ್ಯೋಗ ಮೇಳ, ಇವೆಲ್ಲವೂ ಬಿಜೆಪಿ ಕಾಲದಲ್ಲೇ ಆಗಿದ್ದು ಎನ್ನುವ ಸತ್ಯ ಗೊತ್ತಿದ್ದರೂ ರಾಜಕಾರಣಕ್ಕಾಗಿ ಶಿವಯೋಗಿಸ್ವಾವು ಮತ್ತು ಬಿಜೆಪಿಯ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲವೆಂದು ಹೇಳಿದರು.
ಬೋಗಸ್ ಮತದಾರರು: ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ 4 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರು ಇದ್ದಾರೆ. 2008ರಲ್ಲಿ ಪದವೀಧರ ಅಲ್ಲದವರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಕೂಡಲೇ ಈ ಬೋಗಸ್ ಮತದಾರರನ್ನು ಅನರ್ಹಗೊಳಿಸಬೇಕು, ಮತಗಟ್ಟೆಗಳಿಗೆ ಸಿಸಿ ಕ್ಯಾಮಾರ ಅಳವಡಿಸಿ ನಕಲಿ ಮತದಾನ ತಡೆಯಬೇಕು. ಜಿಲ್ಲಾಧಿಕಾರಿಗಳು ಈ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದರು. ವಿಧಾನ ಪರಿಷತ್ಸ್ದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರದ ಅಭಿವೃದ್ಧಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ವಿಧಾನ ಪರಿಷತ್ತಿನಲ್ಲಿ ಪ್ರಬಲವಾದ ವಿರೋಧ ಪಕ್ಷವಿದ್ದರೆ ಆಡಳಿತ ನಡೆಸುವವರಿಗೆ ಎಚ್ಚರಿಕೆಯ ಗಂಟೆ ಆಗುತ್ತದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಗೇರಿ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ಜಿಪಂ ಸದಸ್ಯ ಎಂ.ಎಸ್.ಆನಂದ್, ಮುಖಂಡರಾದ ತಲಗುಂದ ನರಸಿಂಹರಾಜು, ಪ್ರಮೀಳಾ ಮಲ್ಲಿಕಾರ್ಜುನ್, ಜಿಲ್ಲಾ ವಕ್ತಾರ ಶಿಳ್ಳಂಗೆರೆ ಮಹೇಶ್ ಇದ್ದರು.