ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮಕ್ಕಳಲ್ಲಿ ನಿಸರ್ಗದ ಪ್ರೇಮ ಹೆಚ್ಚಿಸಿ: ಪ್ರೊ. ಚಂದ್ರಶೇಖರ ನಂಗಲಿ

Mainashree
Updated On : 17 Jun 2014, 11:45 am

ಕೋಲಾರ: ಮಕ್ಕಳು ಓದಿನ ಜ್ಞಾನದ ಜತೆಗೆ ಸಾಮಾಜಿಕ ಜ್ಞಾನ ಹೊಂದಲು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಸಾಹಿತಿ, ವಿಮರ್ಶಕ ಪ್ರೊ. ಚಂದ್ರಶೇಖರ ನಂಗಲಿ ತಿಳಿಸಿದರು. ತಾಲೂಕಿನ ಕೋರಗಂಡಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಶಿಕ್ಷಕ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಶಿಕ್ಷಕ ಮತ್ತು ಸಮಾಜ ಕುರಿತು ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಪರಿಸರ ವೈವಿಧ್ಯತೆಗೆ ಧಕ್ಕೆ ಬಾರದಂತೆ ನಡೆಯಲು ಮಕ್ಕಳಿಗೆ ತಿಳಿವಳಿಕೆ ನೀಡಿ, ಸಕಲ ಜೀವರಾಶಿಗಳ ಅಸ್ಥಿತ್ವದಲ್ಲೇ ಮಾನವನ ಹಿತ ಅಡಗಿದೆ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿ, ನಿರ್ಗಸದ ಮೇಲೆ ಪ್ರೇಮ ಹೆಚ್ಚಿಸಿ ಎಂದರು. ಮಕ್ಕಳಲ್ಲಿ ಜಾತಿ, ಮತೀಯ ಅಸೂಯೆಗೆ ಜಾಗವಿಲ್ಲದಂತೆ ಮಾಡಿ, ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿ, ಅವರನ್ನು ಓದಿನೆಡೆಗೆ ಸೆಳೆಯುವ ಮುನ್ನಾ ಮೌಲ್ಯಗಳನ್ನು ಕಲಿಸಿ ಎಂದರು. ಕೋರಗಂಡಹಳ್ಳಿಯ ಶಾಲಾ ಆವರಣ 4.5 ಎಕರೆ ವಿಸ್ತೀರ್ಣವಿದ್ದು, ಇಲ್ಲಿ ಸುಂದರವಾದ ಕಾಡು ಬೆಳೆಸಲು ನಿರ್ಧರಿಸಲಾಗಿದ್ದು, ಇಂದು ಗಣ್ಯರು ಗಿಡ ನೆಡುವ ಕಾರ್ಯಕ್ಕೂ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾದ ಎಲ್ಲಾ ವಿದ್ಯಾರ್ಥಿಗಳಿಗೂ ತಲಾ ಒಂದೊಂದು ಗಿಡ ನೀಡಿ ಅದನ್ನು ಬೆಳೆಸುವಂತೆ ಮನವಿ ಮಾಡಲಾಯಿತು. ತಾಲೂಕಿನ ವಿವಿಧ ಶಾಲೆಗಳಿಂದ ಬಂದಿದ್ದ ಶಿಕ್ಷಕರಿಗೂ ಕಾರ್ಯಕ್ರಮದ ನೆನಪಿಗಾಗಿ ಒಂದೊಂದು ಗಿಡ ನೀಡಿ ಬೆಳೆಸಲು ಕೋರಲಾಯಿತು. ಸಾಹಿತಿ ನಂಗಲಿ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement