ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ ಡಿಸಿಸಿ ಬ್ಯಾಂಕ್ 25 ನೌಕರರ ವಜಾ

Mainashree
Updated On : 19 Jun 2014, 11:29 am

ಕೋಲಾರ: ಅಕ್ರಮ ನೇಮಕ ಆರೋಪದಡಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ 25ನೌಕರರನ್ನು ಸೇವೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘಿಸಿ ನೇಮಕವಾಗಿರುವ ನೌಕರರ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಸರ್ಕಾರ ಈ ಕ್ರಮವನ್ನು ಜರುಗಿಸಿದೆ. ಅದೇ ರೀತಿ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಕ್ರಮ ಜರುಗಿಸುವಂತೆ 18 ವರ್ಷಗಳ ಹಿಂದೆ ನಡೆದಿದ್ದ ಈ ಹಗರಣಕ್ಕೆ ಇದೀಗ ಇತಿಶ್ರೀ ಹಾಡಿದಂತಾಗಿದೆ.
1997ಮತ್ತು 98ರಲ್ಲಿ ಕೋಲಾರ ಡಿಸಿಸಿ ಬ್ಯಾಂಕ್‌ನ ಅಂದಿನ ಆಡಳಿತ ಮಂಡಳಿಯು ನೇಮಕಾತಿ ನಿಯಮಾವಳಿಗಳನ್ನು ಉಲ್ಲಂಘಿಸಿ 43 ಮಂದಿಯನ್ನು ನೇಮಕ ಮಾಡಿದೆ ಎಂದು ಕೋಲಾರದ ನಾರಾಯಣಸ್ವಾಮಿ ಎಂಬುವರು ಸಹಕಾರಿ ಇಲಾಖೆಗೆ ದೂರು ನೀಡಿದ್ದರು. ಬ್ಯಾಂಕ್‌ನ ಲೆಕ್ಕಪರಿಶೋಧನಾ ಅಧಿಕಾರಿಯು ಕೊಟ್ಟ ವರದಿಯಲ್ಲಿಯೂ ನಿಯಮಗಳನ್ನು ಉಲ್ಲಂಘಿಸಿ ನೇಮಕಾತಿ ನಡೆದಿರುವುದು ಸ್ಪಷ್ಟಪಡಿಸಿತ್ತು. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ ಸಮಿತಿಯು ಕೊಟ್ಟ ವರದಿಯನ್ನು ಆಧರಿಸಿ ಸಹಕಾರ ಇಲಾಖೆಯು ಕೋಲಾರ ಡಿಸಿಸಿ ಬ್ಯಾಂಕ್‌ನ 25 ಮಂದಿ ನೌಕರರನ್ನು ವಜಾ ಮಾಡಿದ್ದು, ಅಂದಿನ ಆಡಳಿತ ಮಂಡಳಿಯು ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement