ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಂತಾಮಣಿ ಪಾಲಿಟೆಕ್ನಿಕ್ ಕಾಲೇಜಿಗೆ ಸೌಲಭ್ಯ ಕಲ್ಪಿಸಿ

Mainashree
Updated On : 19 Jun 2014, 11:09 am

ಚಿಂತಾಮಣಿ: ಇಲ್ಲಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ವೀರಯ್ಯ ಹಾಗೂ ವೈ.ಎ. ನಾರಾಯಣಸ್ವಾಮಿ ಅವರಿಗೆ ಪಾಲಿಟೆಕ್ನಿಕ್ ಪ್ರಾಚಾರ್ಯ ಬಿ.ಜಯತೀರ್ಥ ಮನವಿ ಮಾಡಿದರು.
ಚುನಾವಣೆ ಪ್ರಚಾರಕ್ಕಾಗಿ ವಿಧಾನ ಪರಿಷತ್ ಸದಸ್ಯರು ಕಾಲೇಜಿಗೆ ಆಗಮಿಸಿದಾಗ ಪ್ರಾಚಾರ್ಯರು ಪಾಲಿಟೆಕ್ನಿಕ್‌ಗೆ ಅಗತ್ಯವಿರುವ ಹೊಸ ಕಟ್ಟಡ, ಪ್ರಯೋಗಾಲಯ, ಕಾರ್ಯಾಗಾರ ಶೆಡ್‌ಗಳನ್ನು ನಿರ್ಮಿಸಿಕೊಡುವಂತೆ ಮನವಿ ಮಾಡಿದರು.  ಮನವಿ ಸ್ವೀಕರಿಸಿದ ವೀರಯ್ಯ ಹಾಗೂ ನಾರಾಯಣಸ್ವಾಮಿ, ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗುವುದಾಗಿ ಭರವಸೆ ನೀಡಿದರು. ಕಾಲೇಜಿನ ಸಿವಿಲ್ ವಿಭಾಗ ಮುಖ್ಯಸ್ಥ ಎಸ್.ಮುರಳಿ, ಆಯ್ಕೆ ಶ್ರೇಣಿ ಉಪನ್ಯಾಸಕರಾದ ಬಿ.ಕೆ. ರಘು, ಕೆ.ವಿ. ವೆಂಕಟರೆಡ್ಡಿ, ಉಪನ್ಯಾಸಕರಾದ ಅಮರನಾಥ್, ಕವಿತಾ, ಅಮರನಾಥ ಗುಪ್ತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement