ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೋರ್‌ವೆಲ್ ಮುಚ್ಚದಿದ್ದರೆ ಕ್ರಮ

Mainashree
Updated On : 19 Jun 2014, 11:08 am

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿನ ತೆರೆದ ಕೊಳವೆ ಬಾವಿಗಳ ಕುರಿತು ಮಾಹಿತಿ ನೀಡುವಂತೆ ನಗರಸಭೆ ಅಧ್ಯಕ್ಷ ಮುಬಾರಕ್ ಅವರು ಜನತೆಗೆ ಮನವಿ ಮಾಡಿದ್ದಾರೆ. ನಗರದ ವಾರ್ಡ್ ನಂ. 13ಕ್ಕೆ ಸೇರಿದ ಪಿಸಿ ಬಡಾವಣೆಯ ಸರ್ಕಾರಿ ಮಾದರಿ ಶಾಲೆಯ ಹಿಂಭಾಗ ತೆರೆದ ಕೊಳವೆ ಬಾವಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, ಈ ಕೊಳವೆ ಬಾವಿಯನ್ನು ಮುಚ್ಚಿಸಲು ನಗರಸಭೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ವಿಫಲಗೊಂಡಿರುವ ಕೊಳವೆಬಾವಿಗಳನ್ನು ಮುಚ್ಚಿಸದಿರುವುದರಿಂದ ಆಗುತ್ತಿರುವ ಅಪಾಯದ ಬಗ್ಗೆ ತಮಗೆ ಅರಿವಿದೆ, ನಗರದ ಯಾವುದೇ ಪ್ರದೇಶದಲ್ಲಿ ತೆರೆದ ಕೊಳವೆಬಾವಿ ಕಂಡು ಬಂದಲ್ಲಿ ತಕ್ಷಣ ತಮಗಾಗಲಿ ಇಲ್ಲವೇ ಆಯುಕ್ತರ ಗಮನಕ್ಕೆ ತಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ನಗರದಲ್ಲಿನ ಯಾವುದಾದರೂ ಖಾಸಗಿ ನಿವೇಶನ, ಜಮೀನಿನಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳನ್ನು ಮುಚ್ಚದೆ ನಿರ್ಲಕ್ಷಿಸಿರುವುದು ತಮ್ಮ ಗಮನಕ್ಕೆ ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಗರಸಭೆಯ ಎಲ್ಲ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಯಾವುದಾದರೂ ತೆರೆದ ಕೊಳವೆಬಾವಿ ಇದ್ದಲ್ಲಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಮುಚ್ಚಿಸುವ ಮೂಲಕ ಜನ-ಜಾನುವಾರುಗಳ ಪ್ರಾಣ ಉಳಿಸಬೇಕೆಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement