ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶಾಂತಿಯುತ ಮತದಾನ

Vishwanath S
Updated On : 21 Jun 2014, 12:18 pm

ಕನ್ನಡಪ್ರಭ ವಾರ್ತೆ ,  ಕೋಲಾರ ,  ಜೂ.20
ತೀವ್ರ ಕುತೂಹಲ ಮೂಡಿಸಿರುವ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು ಶೇ.54.56 ರಷ್ಟು ಮತದಾನವಾಗಿದೆ.
ಬಿಜೆಪಿಯಿಂದ ಮರು ಆಯ್ಕೆ ಬಯಸಿ ಡಾ. ಶಿವಯೋಗಿಸ್ವಾವು, ಜೆಡಿಎಸ್‌ನಿಂದ ಚೌಡರೆಡ್ಡಿ, ಕಾಂಗ್ರೆಸ್ಸಿನಿಂದ ಮುರಿಗೇಂದ್ರಪ್ಪ ಸೇರಿದಂತೆ 12 ಮಂದಿ ಸ್ಪರ್ಧಿಸಿದ್ದರು.
ಕೋಲಾರ ಜಿಲ್ಲೆಯಲ್ಲಿ ಐದು ತಾಲೂಕಿನ 15 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಮತಗಟ್ಟೆಗಳ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು, ಅಭ್ಯರ್ಥಿಗಳ ಕಡೆಯ ಬೆಂಬಲಿಗರು ಮತದಾರರನ್ನು ಸೆಳೆಯಲು ತೀವ್ರ ಪೈಪೋಟಿ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಪರವಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಪ್ರಚಾರ ನಡೆಸಿದರು. ಪ್ರಾರಂಭದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿದ್ದ ಇದ್ದ ಉತ್ಸಾಹ ಮಧ್ಯಾಹ್ನದ ವೇಳೆಗೆ ತಣ್ಣಗಾಗಿತ್ತು, ಕಾಂಗ್ರೆಸ್ ಪರವಾಗಿ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮಾತ್ರ ಇದ್ದರು. ಜಿಲ್ಲಾಧಿಕಾರಿ  ಡಿ.ಕೆ. ರವಿ ಅವರು ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲೆಯಲ್ಲಿ 10394 ಪುರುಷರು,4934 ಮಹಿಳೆಯರು ಸೇರಿ ಒಟ್ಟು 15328 ಪದವೀಧರರ ಮತದಾರರು ಇದ್ದು ಇಂದು ನಡೆದ ಚುನಾವಣೆಯಲ್ಲಿ 6016 ಮಂದಿ ಪುರುಷರು,2347 ಮಹಿಳೆಯರು ಸೇರಿ ಒಟ್ಟು 8363(ಶೇ.54.56)ಮಂದಿ ಮತ ಚಲಾಯಿಸಿದ್ದಾರೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ.60.90 ರಷ್ಟು ಮತದಾನವಾಗಿದೆ. ಬೆಳಿಗ್ಗೆ 8 ರಿಂದ ಸಂಜೆ 4 ರವರೆಗೆ ಮತದಾನ ಬಿರುಸಿನಿಂದ ನಡೆಯಿತು.
ಶಾಂತಿ ಮತದಾನ
ಬಂಗಾರಪೇಟೆ: ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಚುನಾವಣೆಯು ಪಟ್ಟಣದಲ್ಲಿ ಶಾಂತಿಯುತವಾಗಿ ನಡೆಯಿತು. ಬೆಳಗ್ಗೆಯಿಂದಲೇ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಲವಲವಿಕೆಯಿಂದ ಮತದಾರರನ್ನು ಸೆಳೆಯುತ್ತಿದ್ದರು.
ತಾಲೂಕಲ್ಲಿ ಒಟ್ಟು 1619 ಮತದಾರರಿದ್ದು ಎರಡು ಮತಗಟ್ಟೆಗಳನ್ನು ಸ್ಥಾಪಿಸಿದ್ದು ಈ  ಪೈಕಿ ಮತಗಟ್ಟೆ ಸಂಖ್ಯೆ 98ರಲ್ಲಿ 450 ಮತಗಳು ಚಲಾವಣೆಯಾಗಿದ್ದು 99ರಲ್ಲಿ 474 ಮತಗಳು ಚಲಾವಣೆಯಾಗಿದೆ ಒಟ್ಟು 924 ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.
ಕಳೆದ 15ದಿನಗಳಿಂದ ಎಲ್ಲಾ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಬಿರುಸಿನಿಂದ ಮತ ಪ್ರಚಾರ ಕೈಗೊಂಡಿದ್ದರು. ಈ ಹಿಂದೆ ಈ ಚುನಾವಣೆ ಯಾವುದೇ ಸದ್ದಿಲ್ಲದೆ ನಡೆಯುತ್ತಿತ್ತು. ಆದರೆ ಈ ಬಾರಿ ವಿಧಾನಸಭೆ ಚುನಾವಣೆ ರೀತಿಯಲ್ಲೇ ಅಬ್ಬರದ ಪ್ರಚಾರ ಮಾಡಿದರು.
ಶೇ.63 ಮತದಾನ
ಚಿಂತಾಮಣಿ: ಪದವೀದರರ ಕ್ಷೇತ್ರಕ್ಕೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿ ನಡೆದಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತದಾನ ನಡೆಯಿತು. ಮತದಾರರನ್ನು ಸೆಳೆಯಲು ಹಲವರು ಆಸೆ ಆಮಿಷ ತೋರಿದರು. ಒಟ್ಟು 3,788 ಮತದಾರರಲ್ಲಿ 2,373 ಮತ ಚಲಾವಣೆ ಆಗಿ ಶೇ.63 ರಷ್ಟು ಮತದಾನವಾಗಿದೆ.
ಮುಳಬಾಗಲಲ್ಲಿ ಮತದಾನ
ಮುಳಬಾಗಲು: ಪಟ್ಟಣದ ಮಿನಿವಿಧಾನಸೌಧದಲ್ಲಿ ನಡೆದ ಅಗ್ನೇಯ ಪದವೀಧರ ಚುನಾವಣೆಯಲ್ಲಿ ಮತದಾನದಲ್ಲಿ ಒಟ್ಟು 2,129 ಮಂದಿ ಮತದಾರರಲ್ಲಿ ಕೇವಲ 1,219 ಮಂದಿ ಮಾತ್ರ ಮತದಾನ ಮಾಡಿದರು. ಎಲ್ಲಾ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಒಲೈಸಲು ತಂತ್ರಗಾರಿಕೆಗಳಲ್ಲಿ ತೊಡಗಿದ್ದರು.
ಕೋಲಾರ ಜಿಲ್ಲೆ ತಾಲೂಕುವಾರು ಮತದಾನ ವಿವರ
ತಾಲೂಕು    ಪುರುಷರು    ಮಹಿಳೆಯರು    ಒಟ್ಟು    ಪುರುಷರು    ಮಹಿಳೆಯರು    ಒಟ್ಟು
ಶ್ರೀನಿವಾಸಪುರ    2349     1168    3517    1482    517             1999
ಕೋಲಾರ     3237    1636    4873    1760    732    2492
ಮುಳಬಾಗಿಲು    1606    523    2129    948    272    1220
ಮಾಲೂರು    1153    418    1571    673    225    898
ಬಂಗಾರಪೇಟೆ      1099     520          1619    673    251    924
ಕೆಜಿಎಫ್    950    709    1659    480    350    830
ಒಟ್ಟು    10394    4934    15328    6016    2347    8363
ಕೋಲಾರ ಜಿಲ್ಲೆ
ಶೇ.54.56
ಚಿಕ್ಕಬಳ್ಳಾಪುರ ಜಿಲ್ಲೆ
ಶೇ.60.90

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement