ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಲಾ ಮಾಸ್ಟರ್‌ಗಳಿಗೆ ಕನ್ನಡದ ಮೇಲೆ ಪ್ರೀತಿ ಹೆಚ್ಚಲಿ : ಸಾಹಿತಿ ಸ. ರಘುನಾಥ

Mainashree
Updated On : 21 Jun 2014, 10:56 am

ಕೋಲಾರ: ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಮಾಸ್ಟರ್‌ಗಳಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದಿದ್ದರೆ ಮಕ್ಕಳಿಗೆ ಕನ್ನಡ ಕಲಿಸುವುದು ಕಷ್ಟವಾಗುತ್ತದೆ ಎಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೂ ಆಗಿರುವ ಸಾಹಿತಿ ಸ. ರಘುನಾಥ ಅಭಿಪ್ರಾಯಪಟ್ಟರು.
ಶ್ರೀನಿವಾಸಪುರ ತಾಲೂಕಿನ ಯಲ್ದೂರಿನಲ್ಲಿ ಶನಿವಾರ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಮೇಷ್ಟ್ರುಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಆಸಕ್ತಿ ತೋರುವುದು ಯಾವ ನ್ಯಾಯ,ಬಹುತೇಕ ಖಾಸಗಿ ಶಾಲೆಗಳಲ್ಲಿ ಸರ್ಕಾರಿ ಶಾಲೆಗಳ ಮೇಷ್ಟ್ರುಗಳ ಮಕ್ಕಳು ಮೊದಲ ಸಾಲಿನ ಬೆಂಚಿನಲ್ಲಿ ಕುಳಿತಿರುತ್ತಾರೆ. ಹೆಂಗಸರಂತೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮೀಡಿಯಂಗೆ ಸೇರಿಬೇಕೆಂದು ಗಂಡಂದಿರ ಬಳಿ ಜಗಳವಾಡುತ್ತಾರೆ. ಈ ರೀತಿ ಆದರೆ ಕನ್ನಡ ಭಾಷೆ ಉಳಿಯುವುದು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ, ನಾವು ಗಿರಾಕಿಗಳು ಆಗಿರುವುದರಿಂದ ಅವರು ಶಿಕ್ಷಣವನ್ನು ಅದರಲ್ಲೂ ಅಂಗ್ಲ ಮಾಧ್ಯಮವನ್ನು ವ್ಯಾಪಾರದ ವಸ್ತುವಾಗಿಟ್ಟುಕೊಂಡಿದ್ದಾರೆಂದು ಮಾರ್ಮಿಕವಾಗಿ ನುಡಿದರು.
ಮೊದಲು ನಾವು ಬದಲಾಗಬೇಕು, ಖಾಸಗಿ ವಿದ್ಯಾ ಸಂಸ್ಥೆಗಳಿಗೆ ನಮ್ಮ ಮಕ್ಕಳನ್ನು ಗಿರಾಕಿಗಳನ್ನಾಗಿ ಮಾಡುವುದನ್ನು ಬಿಡಬೇಕು. ನಮ್ಮ ಮಕ್ಕಳು ಮಾತ್ರ ಇಂಗ್ಲಿಷ್ಕ್‌ಲಿಯಬೇಕು ಬೇರೆಯಯವರು ಏನಾದರೇನು ಎಂಬ ಧೋರಣೆ ಬಿಡದಿದ್ದರೆ ಕನ್ನಡ ಮಾಧ್ಯಮವನ್ನು ಉಳಿಯಲು ಯಾರಿಂದಲೂ ಸಾಧ್ಯವಾಗುವುದಿಲ್ಲವೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement