ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಳಪೆ ರಸ್ತೆಯ ಗುಣಮಟ್ಟ ಪರಿಶೀಲನೆ

Mainashree
Updated On : 23 Jun 2014, 11:12 am

ಕೋಲಾರ: ನಗರದ 14ನೇ ವಾರ್ಡ್‌ಗೆ ಸೇರಿದ ಜಯನಗರದಲ್ಲಿನ ಶ್ರೀಗೋಕುಲ್ ನಾರಾಯಣಸ್ವಾಮಿ ಮನೆ ಮುಂಭಾಗದ ರಸ್ತೆ ಹಾಗೂ 4ನೇ ವಾರ್ಡ್‌ಗೆ ಸೇರಿದ ವೀರಾಂಜನೆಯ ನಗರದ ಕೆ.ಎಚ್.ಮುನಿಯಪ್ಪ ಅವರ ಹಳೇ ಮನೆ ಮುಂಭಾಗದ ಸಿಮೆಂಟ್ ರಸ್ತೆಗಳು ಕಳಪೆಯಾಗಿವೆ ಎಂಬ ದೂರಿನ ಮೇರೆಗೆ ಬೆಂಗಳೂರಿನ ಲೋಕಾಯುಕ್ತ ಕಚೇರಿಯ ಸಹಾಯ ಕಾರ್ಯಪಾಲಕ ಅಭಿಯಂತರ ಎಂ.ದೇವಿ ಪ್ರಸಾದ್ ನೇತೃತ್ವದಲ್ಲಿ ಸೋಮವಾರ ರಸ್ತೆಗಳ ಗುಣಮಟ್ಟ ಪರಿಶೀಲಿಸಲಾಯಿತು.
ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಅವರು ಸದರಿ ರಸ್ತೆಗಳ ಬಗ್ಗೆ 2013, ನ.12ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ಇರುವ ಮುಖ್ಯ ಎಂಜನಿಯರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಇಇ ಎಂ.ದೇವಿಪ್ರಸಾದ್ ಅವರು ತಮ್ಮ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸೋಮವಾರ ಜಯನಗರದ 14ನೇ ವಾರ್ಡ್‌ಗೆ ಹಾಗೂ 5ನೇ ವಾರ್ಡ್‌ನ ವೀರಾಂಜನೇಯ ನಗರಕ್ಕೆ ಭೇಟಿ ನೀಡಿ ಸಿಮೆಂಟ್ ರಸ್ತೆಗಳ ಪರಿಶೀಲನೆ ಮಾಡಿದರು. ಇವರೊಟ್ಟಿಗೆ ಇದ್ದ ರಸ್ತೆಗಳ ಗುಣಮಟ್ಟ ವಿಭಾಗದ ಕ್ವಾಲಿಟಿ ಕಂಟ್ರೋಲರ್ ಸಿದ್ದಲಿಂಗಕುಮಾರ್ ಅವರು ಶ್ರೀ ಗೋಕುಲ್ ನಾರಾಯಣಸ್ವಾಮಿ ಮನೆ ಮುಂದೆ ಹಾಕಿರುವ ಸುಮಾರು 8 ಲಕ್ಷ ವೆಚ್ಚದ ಸಿಮೆಂಟ್ ರಸ್ತೆಯ ಗುಣಮಟ್ಟವನ್ನು ಆತ್ಯಾಧುನಿಕ ಮಾಪನದಿಂದ ಅಳತೆ ಮಾಡಿ ರಸ್ತೆಗೆ ಬಳಸಿರುವ ಜಲ್ಲಿ ಕಲ್ಲು, ಸಿಮೆಂಟ್ ಪ್ರಮಾಣವನ್ನು, ರಸ್ತೆಯ ಅಳತೆ ದಾಖಲು ಮಾಡಿಕೊಂಡರು. ರಸ್ತೆ ಕಾಮಗಾರಿ ನಡೆಯುತ್ತಿದ್ದಾಗಲೇ ತಾವು ಸಂಬಂಧಪಟ್ಟವರಿಗೆ ದೂರು ನೀಡಿದರೂ ಗಮನಕ್ಕೆ ತೆಗೆದುಕೊಳ್ಳಲಿಲ್ಲ, ಬಿಲ್ ಮಾಡುವಾಗ ಗುಣಮಟ್ಟ ಪರಿಶೀಲಿಸಿದ್ದಲ್ಲಿ ಸರ್ಕಾರಕ್ಕೆ ನಷ್ಟ ತಪ್ಪಿಸಬಹುದಾಗಿತ್ತೆಂದು ನಗರಸಭೆ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಮುರಳಿಗೌಡ ಎಇಇ ದೇವಿ ಪ್ರಸಾದ್ ಬಳಿ ದೂರಿದರು. ಕಳಪೆ ಕಾಮಗಾರಿಗೆ ಕಾರಣರಾಗಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರಸ್ತೆಗಳ ಗುಣಮಟ್ಟ ಪರಿಶೀಲನೆ ಮಾಡಿದ ಬಳಿಕ ನಗರಸಭೆಯಲ್ಲಿ ಎಇಇ ದೇವಿಪ್ರಸಾದ್ ನಗರಸಭೆಯ ಆಯುಕ್ತ ಜಗದೀಶ್, ಇಇ ಕೊಟ್ರೇಶ್ ಸಮ್ಮುಖದಲ್ಲಿ ಮಹಜರ್ ನಡೆಸಿ ದೂರುದಾರ ಮುರಳಿಗೌಡರಿಂದ ಸಹಿ ಪಡೆದರು. ಇನ್ನು 4 ದಿನಗಳ ನಂತರ ಬೆಂಗಳೂರಿನಲ್ಲಿ ಜಯನಗರ, ವೀರಾಂಜನೇಯ ನಗರದ ಸಿಮೆಂಟ್ ರಸ್ತೆಗಳ ಗುಣಮಟ್ಟ ಪರೀಕ್ಷೆ ನಡೆಸಲಾಗುವುದು. ಆಗ ತಾವು ಸಹ ಖುದ್ದು ಹಾಜರಾಗಬಹುದೆಂದು ಆಹ್ವಾನ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement