ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ತಡೆಗೆ ಆಗ್ರಹ

Mainashree
Updated On : 23 Jun 2014, 11:12 am

ಕೋಲಾರ: ಗ್ರಾಮದ ಕೆಲವು ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಯುವಂತೆ ಒತ್ತಾಯಿಸಿ ತಾಲೂಕಿನ ಚೌಡದೇನಹಳ್ಳಿ ಸ್ತೀಶಕ್ತಿ ಸಂಘದ ಕಾರ್ಯಕರ್ತರು, ರೈತ ಸಂಘದ ಸಹಕಾರದೊಂದಿಗೆ ನಗರದ ಅಬಕಾರಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಮುನಿವೆಂಕಟ ಹೆಂಡತಿ ರಾಮಕ್ಕ, ಸಾರಾಯಿ ಮುನಿಯಮ್ಮ, ಜನಾರ್ದನಪ್ಪನ ಮಗ ನಾರಾಯಣ ಸ್ವಾಮಿ, ಶ್ರೀನಿವಾಸಪ್ಪನ ಮಗ ರಾಜು ಮತ್ತು ಮುನಿಯಪ್ಪನ ಮಗ ಕೃಷ್ಣಪ್ಪ ಎಂಬುವರು ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮ ಮದ್ಯಮಾರಾಟ ಮಾಡುತ್ತಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು. ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿಗಳು, ಈಗಾಗಲೇ ಇದೇ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ದಂಡ ಹಾಕಿರುವುದಾಗಿ ತಿಳಿಸಿದರು. ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದಾಗ ಪ್ರತಿಭಟನೆ ತೆರವುಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement